kannada song lyrics kaviraj
ಕವಿರಾಜ್ ಸಾಹಿತ್ಯ ದ ಕನ್ನಡ ಸಿನಿಮಾಗಳು ಅವರ ಬರಹ
Rcb ಬಗ್ಗೆ ಕವಿರಾಜ್
ಹರಾಜಿನ ಮೊದಲ ದಿನ ಮುನಿಸಿಕೊಂಡಿದ್ದ ಆರ್ಸಿಬಿ ಅಭಿಮಾನಿಗಳು ಎರಡನೇ ದಿನ ತೃಪ್ತರಾದರೆಂಬ ಅಭಿಪ್ರಾಯ ಗಮನಿಸಿದೆ. ಆದರೆ ನನ್ನ ಪ್ರಕಾರ ಹುಟ್ಟುಗುಣ ಸುಟ್ಟರೂ ಹೋಗದು ಗಾದೆ ಆರ್ಸಿಬಿ ಮ್ಯಾನೇಜ್ಮೆಂಟಿನ ಘೋಷವಾಕ್ಯದಂತಿದೆ.
ಐಪಿಎಲ್ ಚಾಂಪಿಯನ್ ಆಗಬೇಕೆಂದರೆ ಮೊದಲು IPL ಫಾರ್ಮ್ಯಾಟ್ ಅನ್ನು ಅರ್ಥ ಮಾಡಿಕೊಳ್ಳಬೇಕು . ಕೇವಲ ಹೊಡಿಬಡಿಯ ಬ್ಯಾಟ್ಸ್ಮನ್ ಗಳಿಂದ ಐಪಿಎಲ್ ಗೆಲ್ಲಲು ಸಾಧ್ಯವಿಲ್ಲ . ಬರೀ ಹಿಟ್ಟರ್ ಗಳನ್ನು ಗುಡ್ಡೆ ಹಾಕಿಕೊಳ್ಳುವುದು ಆರ್ಸಿಬಿಯ ಹಳೆ ಚಾಳಿ. ಭಯಂಕರ ಹಿಟ್ಟರ್ ಗಳ ದೊಡ್ಡಪ್ಪಂದಿರಾದ ಗೇಲ್, ಎಬಿಡಿ, ಮ್ಯಾಕ್ಸ್ವೆಲ್ ಎಲ್ಲಾ ಆರ್ಸಿಬಿಗಾಗಿ ಬ್ಯಾಟ್ ಬೀಸಿ ಆಗಿದೆ. ಓವರಿಗೆ ಮೂರ್ನಾಲ್ಕೈದು ಸಿಕ್ಸರ್ ಸಿಡಿಸಬಲ್ಲ ಎರಡು ಮೂರು ಬ್ಯಾಟ್ಸ್ಮನ್ಗಳು ಈಗ ಎಲ್ಲ ತಂಡಗಳಲ್ಲೂ ಇದ್ದಾರೆ . ಸ್ಕೈ, ಪಂತ್, ಜೈಸ್ವಾಲ್ , ಹಾರ್ದಿಕ್ ಬಿಡಿ, ಇನ್ನೂ ಭಾರತ ತಂಡದಲ್ಲಿ ಸ್ಥಾನ ಪಡೆಯಲಾಗದ / ಗಟ್ಟಿಗೊಳಿಸಿಕೊಳ್ಳಲಾಗದ ನಮ್ಮ ಲೋಕಲ್ ಪ್ಲೇಯರ್ ಗಳೇ ಅಂತಾರಾಷ್ಟ್ರೀಯ ಆಟಗಾರರನ್ನು ಮೀರಿಸಿ ಸಿಕ್ಸರ್ಸ್ ಚಚ್ಚಬಲ್ಲರು . ರಾಹುಲ್ ಥೆವಾಟಿಯ , ರಿಂಕು ಸಿಂಗ್ , ಶಿವಂ ದುಬೆ , ಅಭಿಷೇಕ್ ಶರ್ಮ , ರಜತ್ ಪಾಟೀದಾರ್ ಅಂತಹಾ ಆಟಗಾರರು ಯಾವ ಅಂತಾರಾಷ್ಟ್ರೀಯ ಆಟಗಾರರಿಗೆ ಕಡಿಮೆ ಇಲ್ಲದೆ ಅಬ್ಬರಿಸಬಲ್ಲರು . ಇಂತವರು ಈಗ ಎಲ್ಲ ತಂಡಗಳಲ್ಲೂ ದಂಡಿಯಾಗಿ ಇದ್ದಾರೆ .
ಕೇವಲ ಬ್ಯಾಟಿಂಗ್ ಹೆವಿ ತಂಡಗಳು ಐಪಿಎಲ್ ಗೆಲ್ಲಲು ಸಾಧ್ಯವಿಲ್ಲ .
ಮೂರು ವಿಭಾಗಗಳಲ್ಲೂ ಸಮತೋಲನ ಸಾಧಿಸಿದ ತಂಡಗಳು ಮಾತ್ರವೇ ಚಾಂಪಿಯನ್ ಆಗಿವೆ . ಹೆಚ್ಚು difference ಮಾಡುವುದು ತಂಡದ ಬೌಲಿಂಗ್ . ಇಂತಾ ಹೊಡಿಬಡಿಯ ಆಟದಲ್ಲೂ ಹೆಚ್ಚು ರನ್ ಬಿಟ್ಟುಕೊಡದ , ಎಂಥ ಒತ್ತಡದ ಪರಿಸ್ಥಿತಿಯಲ್ಲೂ ಲೈನ್ ಮತ್ತು ಲೆಂಥ್ ಮೇಲೆ ನಿಯಂತ್ರಣ ಕಳೆದುಕೊಳ್ಳದ ಚಾಣಾಕ್ಷ ಬೌಲಿಂಗ್ ಪಡೆ ಹಾಗೂ ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಅಷ್ಟೇ ಪರಿಣಾಮಕಾರಿ ಆಲ್ರೌಂಡರ್ ಇರುವ ತಂಡಗಳು ಮಾತ್ರ ಚಾಂಪಿಯನ್ ಆಗಬಲ್ಲವು . ಚೆನ್ನೈ , ಮುಂಬೈ , ಕೋಲ್ಕತ್ತಾ ಪದೇ ಪದೇ ಚಾಂಪಿಯನ್ ಆಗಲು ಕಾರಣವಾಗಿದ್ದು ಮೂರು ವಿಭಾಗದ ಸಮತೋಲನವೇ.
ಎಂದಿನಂತೆ ಈಗಲೂ ಆರ್ ಸಿ ಬಿ ಯ ಬೌಲಿಂಗ್ ಪಡೆ ಚಾಂಪಿಯನ್ ಆಗುವಷ್ಟು ಸಮರ್ಥವಾಗಿಲ್ಲ. ಕೇವಲ ಭುವನೇಶ್ವರ್ ಕುಮಾರ್ ಮಾತ್ರ ಮ್ಯಾಚ್ ವಿನ್ನಿಂಗ್ ಎಬಿಲಿಟಿ ಇರೋ ಬೌಲರ್ . ಹೇಜಲ್ವುಡ್ ಅವರ ತಂಡದಲ್ಲೇ ಸ್ಟಾರ್ಕ್ ಮತ್ತು ಕಮ್ಮಿನ್ಸ್ ನಂತರ ಮೂರನೇ ಪ್ರಾಶಸ್ತ್ಯದ ಬೌಲರ್ . ಚಹಾಲ್, ಕುಲ್ದೀಪ್, ಸುನಿಲ್ ನರೈನ್, ರಶೀದ್ ಖಾನ್ , ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅಶ್ವಿನ್ , ಜಡೇಜಾ ಮಟ್ಟದ ಒಬ್ಬ ಮ್ಯಾಚ್ ವಿನ್ನಿಂಗ್ ಏಸ್ ಸ್ಪಿನ್ನರ್ ಒಬ್ಬರ ಕೊರತೆ ಖಂಡಿತವಾಗಿಯೂ ಮತ್ತೆ ಕಾಡಲಿದೆ.
ಹಾಗೆಯೇ ಪಾಂಡ್ಯ , ಜಡೇಜಾ, ಸ್ಟೋಯ್ನಿಸ್, ಅಕ್ಷರ್ ಪಟೇಲ್, ಸ್ಯಾಮ್ ಕರ್ರನ್ ಅಂತಹಾ ಒಬ್ಬ ಅಪ್ಪಟ ಆಲ್ರೌಂಡರ್ ಕೊರತೆಯೂ ಎಂದಿನಂತೆ ಮುಂದುವರೆದಿದೆ. ಕೃನಾಲ್ ಪಾಂಡ್ಯ ಇನ್ನೂ ಮೊದಲ ಪಂಕ್ತಿಯ ಆಲ್ರೌಂಡರ್ ಸಾಲಿಗೆ ಸೇರುವುದಿಲ್ಲ.
RCB ಬಿಡ್ಡಿಂಗ್ ಮೆದುಳುಗಳನ್ನು ಹೊಗಳಲು ನನ್ನಲಂತೂ ಪದಗಳಿಲ್ಲ . ಹಾಗಾಗಿ ಆ ಬಗ್ಗೆ ಮಾತಾಡುವ ಸಾಹಸಕ್ಕೆ ನಾನು ಕೈ ಹಾಕುವುದಿಲ್ಲ . ಆದರೆ ಕಡಿಮೆ ಮೊತ್ತಕ್ಕೆ ಅತ್ಯಂತ ಉಪಯುಕ್ತ ಆಟಗಾರರನ್ನು ಕೊಳ್ಳುವುದು ಹೇಗೆಂಬುದಕ್ಕೆ ಚೆನ್ನೈ ಉದಾಹರಣೆ . ಹಾಗಾಗೇ ಅವರ ತಂಡ ಹೆಚ್ಚು ಸಲ ಚಾಂಪಿಯನ್ ಆಗಿರುವುದು . ಚಾಂಪಿಯನ್ ಆಗಲು ಸ್ಟಾರ್ ಪ್ಲೇಯರ್ಸ್ ಗಿಂತ ಇಂತಹಾ utility players ( ಕೆಲಸಕ್ಕೆ ಬರುವ ) ಹೆಚ್ಚು ಅವಶ್ಯಕ
RCB ಪರ ಬಿಡ್ಡಿಂಗ್ ಕುಳಿತೋರಿಗೆ ಒಂದು ಅರ್ಜೆಂಟ್ ಮೆಸೇಜ್ ಕಳಿಸ್ಬೇಕು . Cricket ಟೀಮ್ ಆಗೋಕೆ ಕನಿಷ್ಠ 11 ಪ್ಲೇಯರ್ಸ್ ಇರಬೇಕು ಅಂತಾ 🫣.. ಯಾರಿಗೂ ಬಿಡ್ ಮಾಡ್ತಾನೆ ಇಲ್ಲ 😇 ಆರೇಳು ಪ್ಲೇಯರ್ಸ್ ಇಟ್ಕೊಂಡು ವಾಲಿಬಾಲ್ ಟೀಮ್ ಕಟ್ಟೊ ಐಡಿಯಾ ಏನಾದ್ರು ಉಂಟಾ ??🤔🙈
ಈವರೆಗೆ ಕನ್ನಡ ಸಿನೆಮಾಗಳಿಗೆ ವೀಕ್ಷಕರಿಲ್ಲ ಎಂದು ಯಾವುದೇ ಕನ್ನಡ ಸಿನೆಮಾಗಳನ್ನು ತನ್ನಲ್ಲಿ ಪ್ರದರ್ಶಿಸದ ನೆಟ್ ಫ್ಲಿಕ್ಸ್ ವಾಹಿನಿ ಇದೀಗ ಮೊದಲ ಬಾರಿಗೆ ‘ಬಘೀರ’ ಸಿನೆಮಾದ ಪ್ರದರ್ಶನ ಹಕ್ಕುಗಳನ್ನು ಪಡೆದುಕೊಂಡಿದೆ . ಅದಕ್ಕಿಂತ ಮಹತ್ವದ ಸಂಗತಿಯೆಂದರೆ ಬಘೀರ ಇದೀಗ ದೇಶದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಡುತ್ತಿರುವ ಚಿತ್ರಗಳಲ್ಲಿ ‘ದೇವರ’ ನಂತರ ಎರಡನೇ ಸ್ಥಾನದಲ್ಲಿದೆ . ಕೇವಲ ಗಳಿಕೆಯ ಭಾಷೆ ಮಾತ್ರ ಅರ್ಥವಾಗುವ ಕಾರ್ಪೊರೇಟ್ ಜಗತ್ತಿನೊಂದಿಗೆ ಅದೇ ಭಾಷೆಯಲ್ಲಿ ವ್ಯವಹರಿಸಿದರೆ ಮಾತ್ರ ಯಾರಿಗಾದರೂ ಉಳಿಗಾಲ ಮತ್ತು ಬೆಳವಣಿಗೆ . ಕೊರಗುವ ಬದಲು ಹೀಗೆ ಸಡ್ದು ಹೊಡೆದು ಗೆಲ್ಲುವ ಗುಣ ನಮ್ಮ ಚಿತ್ರರಂಗಕ್ಕೆ ಬರಲಿ .
ತಂತ್ರಜ್ಞಾನ ಇಲ್ಲಿಗೆ ತಂದು ನಿಲ್ಲಿಸಿದೆ .
ಭಾರತ ಆಸ್ಟ್ರೇಲಿಯಾದಂತ ದಿಗ್ಗಜ ತಂಡಗಳ ನಡುವಿನ ಟೆಸ್ಟ್ ಪಂದ್ಯ ,ಸ್ಟಾರ್ ಸ್ಪೋರ್ಟ್ಸ್ ಅಂತಹಾ ಉನ್ನತ ಸಂಸ್ಥೆ . ಜಗತ್ತಿನಾದ್ಯಂತ ಕೋಟಿಗಟ್ಟಲೆ ವೀಕ್ಷಣೆ ಪಡೆಯುತ್ತಾ ಹಣದ ಹೊಳೆ ಹರಿಸುವ ಟೆಲಿಕಾಸ್ಟ್ ಅಲ್ಲೂ ಈ ಮಟ್ಟದ ಚೀಪ್ ಗ್ರಾಫಿಕ್ಸ್ ಬೇಕಿತ್ತಾ ???
ಮೊದಲ ವ್ಯಕ್ತಿ ಸ್ಥಳದಲ್ಲಿ ಇಲ್ಲ ( ಆ ವ್ಯಕ್ತಿಗೆ ಮಾತ್ರ ನೆರಳು ಇಲ್ಲದಿರುವುದನ್ನು ಗಮನಿಸಿ) , ಆದರೂ ಅವರನ್ನು ಅಲ್ಲಿ ಪ್ಲೇಸ್ ಮಾಡಿ ಮೂವರು ಸಂಭಾಷಣೆ ನಡೆಸುತ್ತಿರುವಂತೆ ತೋರಿಸಲಾಗಿದೆ
ನಿನ್ನೆ ಮತ್ತು ಮೊನ್ನೆ ದಯಾನಂದ್ ಸಾಗರ್ ತಾಂತ್ರಿಕ ವಿದ್ಯಾಲಯ ಮತ್ತು BIT( ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ) ಸಂಸ್ಥೆಗಳು ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಖುಷಿ ಕೊಟ್ಟಿತು. ಕಾರ್ಯಕ್ರಮಗಳ ಅದ್ದೂರಿತನ, ಅಚ್ಚುಕಟ್ಟು ಮತ್ತು ಅದಕ್ಕಿಂತಲೂ ಮುಖ್ಯವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಉತ್ಸಾಹ ಅದ್ಭುತವಾಗಿತ್ತು. ಎರಡೂ ಕಾಲೇಜಿನ ನವ -ಯುವ ಪೀಳಿಗೆಯ ಯುವಕ ಯುವತಿಯರ ಪ್ರತಿ ಹೆಜ್ಜೆಯಲ್ಲೂ ಗಾಢ ಕನ್ನಡ ಪ್ರೇಮ ನಿಚ್ಚಳವಾಗಿ ಎದ್ದು ಕಾಣುತ್ತಿದ್ದಿದ್ದು ಭವಿಷ್ಯದ ಬಗ್ಗೆ ಭರವಸೆ ಮೂಡಿಸುವಂತಿತ್ತು
ಧೀರ ಭಗತ್ ರಾಯ್ ತಂಡ ‘ಆಕಾಶದ ನೀಲಿಯೆದ್ದು ನೆಲಕೆ ಅಪ್ಪಳಿಸುವುದು’ ಅಂತಹಾ ಒಳ್ಳೆಯ ಹಾಡು ಬರೆದಿದ್ದಕ್ಕೆ ಕೃತಜ್ಞತಾಪೂರ್ವಕ ಸನ್ಮಾನ ಎಂದು ಕೂರಿಸಿ ನನ್ನುದ್ದದ್ದ ಹಾರ ಹಾಕಿ , ಗೊತ್ತಾಗುವ ಮುನ್ನವೇ ಹೂವಿನರಾಶಿ ಮೈಮೇಲೆ ಸುರಿದೇ ಬಿಟ್ಟರು . ಅಯ್ಯೋ ಇದೆಲ್ಲಾ ನಮ್ಮ ಸಿದ್ಧಾಂತಕ್ಕೆ ಒಗ್ಗೋದಿಲ್ಲ ಎನ್ನುತ್ತಲೇ ಅವರ ಅಪಾರ ಪ್ರೀತಿಗೆ ತಲೆ ಬಾಗಲೇಬೇಕಾಯಿತು. 😍🙏
ಆಕಾಶದ ನೀಲಿಯೆದ್ದು ನೆಲಕೆ ಅಪ್ಪಳಿಸುವುದು …
ಇದು ‘ಧೀರ ಭಗತ್ ರಾಯ್’ ಸಿನೆಮಾಕ್ಕಾಗಿ ನಾನು ಬರೆದ ಹಾಡೋ ಅಥವಾ ಅಸಮಾನತೆ , ಶೋಷಿತ ಸಮುದಾಯಗಳ ಪರ ನನ್ನೆದೆಯಾಳದ ಗಟ್ಟಿ ದನಿಯ ಕ್ರಾಂತಿಯ ಕೂಗೋ ಎಂದು ಕೆಲವೊಮ್ಮೆ ನನಗೆ ಗೊಂದಲವಾಗುತ್ತದೆ . ನನ್ನದೇ ಹಾಡು ಕೇಳುತ್ತಾ ನಾನೇ ರೋಮಾಂಚಗೊಳ್ಳುವ ವಿಶಿಷ್ಟ ಅನುಭವ ಕೊಡುತ್ತಿರುವ ಹಾಡಿದು . ಬಾರಿಸು ಕನ್ನಡ ಡಿಂಡಿಮವ ಹಾಡಲ್ಲಿ ಮಾಡಿದ್ದ ಮೈ ನವಿರೇಳಿಸುವ ಮೋಡಿಯನ್ನು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಇಲ್ಲೂ ಒಡಮೂಡಿಸಿದ್ದಾರೆ . ಈಗಾಗಲೇ 41 ಲಕ್ಷ ವೀಕ್ಷಣೆ ಪಡೆದ ಟ್ರೈಲರ್ ಮೂಲಕ ಸಂಚಲನ ಮೂಡಿಸಿರುವ ಚಿತ್ರದ ಮೇಲಿನ ನಿರೀಕ್ಷೆ ಈಗ ದುಪ್ಪಟ್ಟಾಗಿದೆ . ಡಿಸೆಂಬರ್ 6 ರಂದು ಬಿಡುಗಡೆ ಆಗಲಿರುವ ಕರ್ಣನ್ ಅವರ ನಿರ್ದೇಶನದ ಈ ಸಿನಿಮಾ ತನ್ನ ಸಮಾಜಮುಖಿ ಗಟ್ಟಿ ವಿಷಯವಸ್ತುವಿನಿಂದ ಕ್ರಾಂತಿ ಉಂಟು ಮಾಡಲಿ ಎಂದು ಹಾರೈಸುತ್ತೇನೆ .
ಹಾಡು ಮತ್ತು ಪ್ರೊಮೋಷನಲ್ ವೀಡಿಯೊ ಲಿಂಕ್ ಮೊದಲ ಕಾಮೆಂಟಿನಲ್ಲಿ 👇🏻
ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು “ನಮ್ಮ ನಾಡು ನಮ್ಮ ಆಳ್ವಿಕೆ” ಬಳಗ ಬೈಕ್ ರ‍್ಯಾಲಿಯನ್ನು ಆಯೋಜಿಸುವ ಮೂಲಕ ಬಹಳ ವಿಶಿಷ್ಟವಾದ ಬಗೆಯಲ್ಲಿ ಆಚರಿಸಿತು .
ಬನ್ನಪ್ಪ ಪಾರ್ಕ್ ನಿಂದ ಶುರುವಾಗಿ ಎಂ ಜಿ ರೋಡ್,ದೊಮ್ಮಲೂರು ,ಈಜಿಪುರ ಮಾರ್ಗವಾಗಿ ಮಹದೇವಪುರದ ಫೀನಿಕ್ಸ್ ಮಾಲ್ ವರೆಗೂ ಸುಮಾರು 20 ಕಿಮೀ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು . ಇದರಲ್ಲಿ ಸುಮಾರು 200 ರಷ್ಟು ಕನ್ನಡ ಪರ ಬೈಕ್ ಸವಾರರು ಭಾಗವಹಿಸಿ ದಾರಿಯುದ್ದಕ್ಕೂ ಕನ್ನಡ ಪರ ಘೋಷಣೆ , ಜೈಕಾರಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು . ದಾರಿಯ ಇಕ್ಕೆಲದಲ್ಲೂ ನೆರೆದು ವೀಕ್ಷಿಸಿದ ಬೆಂಗಳೂರಿನ ನಾಗರೀಕರು ಪ್ರತಿಯಾಗಿ ಹರ್ಷೋದ್ಘಾರ ಮಾಡುವ ಮೂಲಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುತ್ತ ಬೆಂಬಲಿಸಿದರು . ರ‍್ಯಾಲಿಯ ಮುಖ್ಯ ಉದ್ದೇಶ ತ್ರಿಭಾಷಾ ಸೂತ್ರದ ಅಡಿಯಲ್ಲಿ ಕನ್ನಡ ಮಕ್ಕಳಿಗೆ ಹೊರೆಯಾಗಿರುವ ಕಡ್ಡಾಯ ಹಿಂದಿ ಪರೀಕ್ಷೆಯನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿತ್ತು . ಅದಕ್ಕೆ ಪೂರಕವಾಗಿ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ರ್ಯಾಲಿಯಲ್ಲಿ ಹಂಚಲಾಯಿತು .
ನಮ್ಮ ನಾಡು ನಮ್ಮ ಆಳ್ವಿಕೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಬೃಹತ್ ಬೈಕ್ ರ್ಯಾಲಿ . ನಾಳೆ ಬೆಳಿಗ್ಗೆ 9 ಗಂಟೆಗೆ ಬನ್ನಪ್ಪ ಪಾರ್ಕ್ ಇಂದ ಶುರುವಾಗಲಿದೆ . ಕನ್ನಡ ಪರ ಬಂಧುಗಳೆಲ್ಲ ಬಂದು ಭಾಗವಹಿಸಿ . ರ್ಯಾಲಿಯ ಥೀಮ್ ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮಕ್ಕಳ ಅಂಕಗಳಿಕೆಗೆ ತೊಡಕಾಗಿರುವ ಹಿಂದಿ ಪರೀಕ್ಷೆಯ ರದ್ದತಿಗೆ ಆಗ್ರಹ .
ನಮ್ಮ ಅಪಾರ್ಟ್ಮೆಂಟ್ ಅಲ್ಲಿ ಕಾರ್ ವಾಶ್ ಮಾಡುವ ಅಸ್ಸಾಮೀ ಮೂಲದ ಹುಡುಗನೊಬ್ಬ ಹಿಂದಿಯಲ್ಲಿ ಏನೋ ಹೇಳಲು ಬಂದ ಕನ್ನಡ ಅಥವಾ ಇಂಗ್ಲೀಷ್ ಅಲ್ಲಿ ಹೇಳು ಅಂದೆ . ಕನ್ನಡ ಬರಲ್ಲಾ ಅಂತಾ ಹಿಂದಿಯಲ್ಲೇ ಹೇಳಿದ . ಕರ್ನಾಟಕದಲ್ಲಿ ಕೆಲಸಕ್ಕೆ ಬಂದ ಮೇಲೆ ಕನ್ನಡ ಕಲಿಯಬೇಕಲ್ಲವೇ , ಇಲ್ಲಿ ಬಂದು ಹಿಂದಿ ಮಾತಾಡೋದಲ್ಲ ಅಂತಾ ಹೇಳಿದೆ . ಯಾಕೆ ಮಾತಾಡಬಾರದು ಹಿಂದಿ ನಮ್ಮ ನ್ಯಾಷನಲ್ ಲ್ಯಾಂಗ್ವೇಜ್ ಅಲ್ವಾ ಎಂದು ಹಿಂಜರಿಕೆಯಲ್ಲೇ ಕೇಳಿದ . ಬಹುಶಃ ಬೇರೆ ದಿನವಾದರೆ ಅವನ ಮೇಲೆ ರೇಗುತ್ತಿದೆನೋ ಏನೋ . ಯಾಕೋ ಹೊಟ್ಟೆಪಾಡಿಗೆ ದುಡಿಯಲು ಬಂದ ಅಮಾಯಕನಂತೆ ಕಾಣುತ್ತಿದ್ದ ಅವನ ಮೇಲೆ ರೇಗಲು ಮನಸಾಗಲಿಲ್ಲ . ಹಿಂದಿ ನಮ್ಮ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ , ಅದು ಸುಳ್ಳು . ನಿನ್ನ ಅಸ್ಸಾಮೀ , ನನ್ನ ಕನ್ನಡ ಎಲ್ಲಾ national language ಗಳೇ ಅಂದೇ . ಹುಡುಗ ಕನ್ಫ್ಯೂಸ್ ಆಗಿ ಏನು ಹೇಳದೆ ಹೊರಟ
ಒಂದು ಗಂಟೆ ನಂತರ ಕೆಲಸಕ್ಕೆ ಹೊರಡಲು ಕಾರಿನ ಬಳಿ ಹೋದೆ . ಅಲ್ಲೇ ಇದ್ದ ಹುಡುಗ “ಸಾಬ್ .. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ನಹಿ ಹೋತೋ , ಪಡ್ತೆ ವಕ್ತ್ ಕಿತಾಬ್ ಮೇ ವೋಹಿ ಲಿಖಾತಾನಾ , ವೋ ಕೈಸಾ ಜೂಟ್ ಹೊ ಸಕ್ತಾ ಹೇ” ಎಂದು ಗಟ್ಟಿ ಮನಸು ಮಾಡಿ ಕೇಳೇಬಿಟ್ಟ . ಅವನ ಪ್ರಶ್ನೆಯಲ್ಲೊಂದು ಪ್ರಾಮಾಣಿಕತೆಯಿದ್ದಿದ್ದು ಗಮನಕ್ಕೆ ಬಂತು . ಇಂಗ್ಲೀಷ್ ಓದೋಕೆ ಬರುತ್ತಾ ಅಂತಾ ಕೇಳಿದೆ . “ಜ್ಯಾದ ನಹಿ ಪಡಾ ಹೂನ್ , ಟೀಕ್ ಸೆ ನಹಿ ಆತಾ , ಧೀರೆ ಧೀರೆ ಪ್ಯಾಡ್ ಸಕ್ತಾ ಹೂನ್” ಅಂದ . ಫೋನ್ ತೆಗೆದು ಗೂಗಲ್ ಗೆ ಹೋಗಿ Is hindi the national language of India ? ಅಂತಾ type ಮಾಡಿ ಅವನಿಗೂ ನಿದಾನಕ್ಕೆ ಓದಿಸಿ search ಕೊಟ್ಟೆ . ಬಂದ ಉತ್ತರವನ್ನ ಅವನಿಗೆ ಓದಿಸಿದೆ . No.. India does not have a national language…… ಅಂತಾ ಕೂಡಿಸಿ ಕೂಡಿಸಿ ಓದಿದ . ಆಶ್ಚರ್ಯ ಆಗಿತ್ತು ಅವನಿಗೆ . “ಏ ಸಛ್ ಹೇ ಕ್ಯಾ ಸಾಬ್” ಅಂದ. ಬೇರೆ ಬೇರೆ ರೀತಿ ಸರ್ಚ್ ಕೊಟ್ಟು ತೋರಿಸಿದೆ . ಎಲ್ಲವೂ ಹಿಂದಿ ನಮ್ಮ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲಾ ಅಂತಲೇ ತೋರಿಸುತ್ತಿತ್ತು . ಹೇಗೆ ನಮ್ಮನ್ನೆಲ್ಲ ಯಾಮಾರಿಸಲಾಗಿದೆ ಎಂದು ಬಿಡಿಸಿ ಹೇಳಿದೆ . ಈ ಕುರಿತ ಗುಜರಾತ್ ಹೈ ಕೋರ್ಟ್ ತೀರ್ಪನ್ನು ತೋರಿಸಿದೆ . ಹುಡುಗ ನಿಬ್ಬೆರಗಾಗಿ ಜ್ಞಾನೋದಯ ಆದಂತಿದ್ದ . “ಸಚ್ ಸಿಕಾನೆ ಕೇಲಿಯೇ ಥ್ಯಾಂಕ್ಸ್ ಭೈಯ್ಯ” ಅಂದವನ ಮಾತಲ್ಲೂ ಪ್ರಾಮಾಣಿಕತೆಯಿತ್ತು . “ಹಮಾರಾ ಅಸ್ಸಾಂ ಮೇ ಬೀ ಹಿಂದಿ ಬಹುತ್ ಹೋ ಚುಕಾ ಹೇ . ಹಮ್ ಸಬ್ ನ್ಯಾಶನಲ್ ಲ್ಯಾಂಗ್ವೇಜ್ ಸಮಜ್ ಕೇ ಮಾನ್ ರಹೇ ತೇ .ಆಜ್ ಕಲ್ ಅಸ್ಸಾಮೀ ಕಮ್ ಸುನ್ ನೇ ಕೋ ಮಿಲ್ ರಹಾ ಹೇ. ಆಜ್ ಸೆ ಮೇ ಕನ್ನಡ ಸೀಕೂಂಗ ” ಅಂದ . ನನ್ನ ಫ್ರೆಂಡ್ಸ್ ಗೆಲ್ಲ ನಿಜ ತಿಳಿಸುತ್ತೀನಿ ಹೇಗೆ search ಮಾಡಬೇಕು ಎಂದು ಮತ್ತೆ ಕೇಳಿ ತಿಳಿದುಕೊಂಡ . ದುರಹಂಕಾರ ತೋರದ ಅಮಾಯಕರಿಗೆ
ಕೋಪಕ್ಕಿಂತ ತಾಳ್ಮೆಯಿಂದ ಅರಿವು ಮೂಡಿಸೋದೇ ಹೆಚ್ಚು ಪರಿಣಾಮಕಾರಿ ಎಂಬ ಪರಮ ಸತ್ಯ ಮತ್ತೊಮ್ಮೆ ರುಜುವಾತಾಗಿ ಒಂಥರಾ ಖುಷಿಯಾಗಿ ಕಾರು ಶುರುಮಾಡಿ ಅವನಿಗೆ ಬೈ ಹೇಳಿ ಹೊರಟೆ .
ಇಂದು ನೀಲಕಂಠನ್ ಆರ್ ಎಸ್ ಅವರು ಬರೆದ ಮೂಲ ಕೃತಿಯನ್ನು ಶ್ರೀ ಕೆ ಪಿ ಸುರೇಶ ಅವರು ಕನ್ನಡಕ್ಕೆ ಅನುವಾದಿಸಿ , ಕಾನ್ಕೇವ್ ಪ್ರಕಾಶನ ಹೊರತಂದಿರುವ ‘ದಕ್ಷಿಣ vs ಉತ್ತರ’ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಪಾಲ್ಗೊಂಡಿದ್ದೆ . ಈ ಕೃತಿಯಲ್ಲಿ ಸಾಕಷ್ಟು ಮಹತ್ವದ ವಿವರ, ವಿಚಾರಗಳನ್ನು ಖಚಿತ ಅಂಕಿ ಅಂಶಗಳೊಂದಿಗೆ ನಿರೂಪಿಸಲಾಗಿದೆ . ಮಾಹಿತಿ ಮತ್ತು ಜಾಗೃತಿ ಎರಡು ಕಾರಣಗಳಿಗಾಗಿ ಇದನ್ನು ನೈಜ ಕನ್ನಡ/ಕರ್ನಾಟಕ ಪರ ಕಾಳಜಿ ಇರುವವರೆಲ್ಲ ಓದಲೇಬೇಕು ಎಂಬುದು ನನ್ನ ಅಭಿಮತ .
ನನ್ನ ಹಿಂದಿನ ಪೋಸ್ಟಿಗೆ ದೊಡ್ಡ ಸಂಖ್ಯೆಯ ಮೆಚ್ಚುಗೆ ಜೊತೆ ಹಲವರು ಪ್ರತಿಕ್ರಿಯಿಸಿದ್ದೀರಿ. ಅಲ್ಲಿ ವಿಮರ್ಶೆಯನ್ನೇ ಮಾಡಬಾರದೇ ? ಅನ್ನೋ ಧಾಟಿಯಲ್ಲಿ ಪ್ರಶ್ನಿಸಿದ ಕೆಲವರ ಕಾಮೆಂಟಿಗೆ ನನ್ನ ಪ್ರತಿಕ್ರಿಯೆ .
ವಿಮರ್ಶೆ ಎಲ್ಲರ ಹಕ್ಕು. ಕಲೆ ವಿಮರ್ಶೆಗೆ ಒಳಪಡಬೇಕು ಎಂದು ಸ್ಪಷ್ಟವಾಗಿ ಬರೆದಿದ್ದೇನೆ. ವಿಮರ್ಶೆ ಮಾಡಬೇಡಿ ಅಂದಿಲ್ಲ . ಆದರೆ ಒಂದೇ ಉಸಿರಿಗೆ/ ಏಟಿಗೆ ಕೊಂದು ಮುಗಿಸುವ ‘ಕ್ರೂರ ವಿಮರ್ಶೆ’ ಮಾಡುವ ಮೊದಲು ಸ್ವಲ್ಪ ಸಂಯಯವಿರಲಿ ಎಂದಿದ್ದೇನೆ . ವಿಮರ್ಶೆಗೆ ಅತಿರೇಕದ ಪ್ರತಿಕ್ರಿಯೆಗಳು ಖಂಡನಾರ್ಹ ಎಂದಿದ್ದೇನೆ. ಪೂರ್ತಿಯಾಗಿ ಓದಿ ಪ್ರತಿಕ್ರಿಯಿಸಲು ಮನವಿ.
Related Stories
December 19, 2024
December 19, 2024
November 26, 2024