ui movie review in kannada 3.5 / 5
Good movie director upendra doing good job
ಚೆನ್ನೈ ಮಂದಿ ಯಾರದೇ ಸಿನಿಮಾ ಆಗಲಿ ಅದೆಂಥದ್ದೆ ಕ್ರೇಜ್ ಹುಟ್ಟಿಹಾಕಿರಲಿ ಅದೆಷ್ಟೇ ಕೋಟಿ ಖರ್ಚು ಮಾಡಿರಲಿ. …
₹60 ಟಿಕೆಟ್ ದರವನ್ನು ಇಟ್ಟೇ ಇಟ್ಟಿರುತ್ತಾರೆ. ಬಹುತೇಕ ಗರಿಷ್ಟ ದರ ₹200 ರ ಅಕ್ಕಪಕ್ಕ ಇಟ್ಟಿರುತ್ತಾರೆ.
ಹಾಗಾಗಿ ಅಲ್ಲಿ ಕುಟುಂಬ ಸಮೇತ ನೋಡಲು ಇಡೀ ಗೆಳೆಯರ ಬಳಗ ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ.
ನಮ್ಮಲ್ಲಿ ಕಷ್ಟ ಕಷ್ಟ.
ನಮ್ಮಲ್ಲಿ ಸಧ್ಯಕ್ಕೆ ಕನಿಷ್ಠ ದರ ಮಲ್ಟಿಪ್ಲೆಕ್ಸ್ ಗಳಲ್ಲಿ ₹250
ಗರಿಷ್ಠ ಕೇಳಲೇಬೇಡಿ…..
ಸಿಂಗಲ್ ಚಿತ್ರಮಂದಿರಗಳು ಮುಂಗಡ ಬುಕಿಂಗ್ ಗೆ ತೆರೆದುಕೊಂಡಿವೆ. ಆದರೆ ಪಿವಿಆರ್ inox ಪರದೆಗಳು ಇನ್ನೂ ತೆರೆದುಕೊಂಡಿಲ್ಲ.
ಯಾಕೆ?
ಪುಷ್ಪ 2 ಎತ್ತಬೇಕಾಗುತ್ತದೆ ಎಂದಾ?
ನೋಡಿದರೆ ಇಷ್ಟು ದೊಡ್ಡ ಅದ್ದೂರಿ ಸಿನಿಮಾಕ್ಕೆ ಬುಧವಾರ ಬುಕಿಂಗ್ ಓಪನ್ ಆಗಲೇಬೇಕಿತ್ತು.
ಏನೋಪ್ಪ ?
ಹೀಗೊಂದು ಯೋಚನೆ.
ಕನ್ನಡದ ಬಹುನಿರೀಕ್ಷಿತ Upendra ಅವರ #UITheMovie ಯು
ತಮಿಳು/ತೆಲುಗು ಮೂಲದ್ದಾಗಿದ್ದರೆ. …
ಇಷ್ಟೊತ್ತಿಗೆ ನಮ್ಮ ವಿತರಕರು/ಪ್ರದರ್ಶಕರು ಓಡೋಡಿ ಹೋಗಿ ಹಣ ಸುರಿದು ತಂದು
ಇಲ್ಲಿ ನೂರಾರು ಪರದೆಗಳಲ್ಲಿ ದುಬಾರಿ ಬೆಲೆಗೆ ತುಂಬಿ ಬಿಡುತ್ತಿದ್ದರು. ವಾರದ ಮುಂಚೆ ಆನ್ಲೈನ್ ಬುಕಿಂಗ್ ತೆರೆದು ಕುಳಿತುಬಿಡುತ್ತಿದ್ದರು.
ಆದರೆ ಭಾರತದಲ್ಲೇ ಕ್ರೇಜ್ ಹುಟ್ಟು ಹಾಕಿರುವ ಸಿನಿಮಾಕ್ಕೆ ಪರಭಾಷೆಯ ವಿತರಕರು / ಪ್ರದರ್ಶಕರು / ಪ್ರೇಕ್ಷಕರು
ಅಂತಹ ಉತ್ಸಾಹ ತೋರಿಸುತ್ತಿಲ್ಲ.
ಚೆನ್ನೈ ನಲ್ಲಿ ಇನ್ನೂ ಪರದೆ ಹಂಚಿಕೆ ಆಗೇ ಇಲ್ಲ. ಬುಕಿಂಗ್ ದೂರದ ಮಾತು. ಅವರ ಗಮನ ಪ್ರೋತ್ಸಾಹವೆಲ್ಲಾ ಮೊದಲಿಗೆ
ವಿಡುದಲೈ 2
ಮೇಲಿದೆ. ಮೊದಲ ಪ್ರಾಶಸ್ತ್ಯ ಆ ಚಿತ್ರಕ್ಕೆ.
ಇನ್ನೂ ಹೈದ್ರಾಬಾದ್ ನಲ್ಲಿ
ಕನ್ನಡಕ್ಕೇ ಒಂದು ಪ್ರದರ್ಶನ
ತೆಲುಗು ಆವೃತ್ತಿಗೆ ಮೂರು ಪ್ರದರ್ಶನ
ನೀಡಲಾಗಿದೆ. ಅವರ ಚಿತ್ತವೆಲ್ಲಾ ಅಲ್ಲರೀ ನರೇಶ್ ಅಭಿನಯದ ಬಚ್ಚಾಲ್ ಮಲ್ಲಿ ಮೇಲಿದೆ.
ಇನ್ನೂ ಕೇರಳಿಗರು ಯುಐ ಅನ್ನು ಕ್ಯಾರೆ ಅಂದಿಲ್ಲ.
ಅದೇ ನಾವುಗಳು ಮಲಯಾಳಂ ನ ಈ ವಾರ ಬಿಡುಗಡೆಯಾಗುತ್ತಿರುವ ಎರಡೂ ಸಿನಿಮಾಗಳಿಗೆ ಪರದೆಗಳನ್ನು ಕೊಟ್ಟು ಟಿಕೆಟ್ ಕೌಂಟರ್ ತೆರೆದುಕೊಂಡು ಕುಳಿತಿದ್ದೇವೆ.
ಇಷ್ಟೇ ಸಮಾಚಾರ.
ನಮ್ಮವರು ಕಲಿಯುವುದಿಲ್ಲ.
ಒಂದು ವಾರದ ಅವಧಿಯಲ್ಲಿ ಎರಡೂ ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿವೆ.
Upendra ಅವರ UI ಪಕ್ಕಾ ನಿರ್ದೇಶಕರ ಚಿತ್ರ. ಈ ಸಿನಿಮಾದಲ್ಲಿ ಮೊದಲ ಆಕರ್ಷಣೀಯ ಅಂಶ ಎಂದರೇ
ಕಥೆ ಹೇಗಿರಬಹುದು,
ನಿರ್ದೇಶನ ಹೇಗಿರಬಹುದು ,
ಹೊಸತನ ಏನಿರಬಹುದು ?
ಎನ್ನುವ ಅಂಶಗಳು. ಏಕೆಂದರೆ ಉಪೇಂದ್ರ ಅವರು ಭಿನ್ನ ವಿಭಿನ್ನ ಚಿತ್ರಗಳಿಗೆ ಹೆಸರುವಾಸಿ.
ಆದರೆ #MaxTheMovie ಯಲ್ಲಿ ನಿರ್ದೇಶಕರ ಬಗೆಗೆ ಅಷ್ಟು ಪರಿಚಯ ಇಲ್ಲ. ಇದೇ ಅವರ ಮೊದಲ ಸಿನಿಮಾ ಆದ್ದರಿಂದ ಅವರ ಸಾಮರ್ಥ್ಯ, ಪಾಸಿಟಿವ್ ಅಥವಾ ನೆಗಟಿವ್ ಗೊತ್ತಿಲ್ಲ.
ಇಲ್ಲಿ ಆಕರ್ಷಕ ಅಂಶ ಎಂದರೇ
Kichcha Sudeep
kichcha ಸುದೀಪ್
ಕಿಚ್ಚ ಸುದೀಪ್
ಅವರು ಮಾತ್ರ. ಈವತ್ತು ಮ್ಯಾಕ್ಸ್ ಸಿನಿಮಾ ಚಿತ್ರಮಂದಿರಕ್ಕೇ ಪ್ರೇಕ್ಷಕರನ್ನು ಸೆಳೆಯುತ್ತಿರುವುದಕ್ಕೇ ಕಾರಣ ಸುದೀಪ್ ಅವರೇ.
ನಮಗೆ ಅಂದರೇ
ಸಿನಿಮಾ ನಿರ್ದೇಶಕರುಗಳಿಗೆ
ಬೇರೆ ನಿರ್ದೇಶಕರು ಎರ್ರಾಬಿರ್ರಿ ಹಣ ಮಾಡಿದಾಗ, ಬಂಗಲೆ ಕಟ್ಟಿದಾಗ, ದುಬಾರಿ ಎನಿಸುವ ಕಾರು ತೆಗೆದುಕೊಂಡಾಗ ಏನೂ ಅನಿಸುವುದಿಲ್ಲ.
ಆದರೇ ಒಂದು ಅದ್ಭುತ ಸಿನಿಮಾ ಮಾಡಿದಾಗ ಒಂದು ಹೊಟ್ಟೆಕಿಚ್ಚು ಶುರುವಾಗುತ್ತದೆ. ಈ ತರಹದ ಸಿನಿಮಾ ನಮ್ಮ ಕೈಯಲ್ಲಿ ಸಾಧ್ಯವಿಲ್ಲವಾ.,.?
ನಾವೂ ಈ ತರಹದ ಸಿನಿಮಾ ಮಾಡಲಿಲ್ಲ ಯಾಕೆ..?
ಈ ತರಹದ ಹೊಟ್ಟೆಕಿಚ್ಚದು. ಆದರೇ ಅದು ಬಹಳ ದಿನ ಇರುವುದಿಲ್ಲ ಎನ್ನುವುದು ಬೇರೆ ಮಾತು.
ನನಗೆ ವೈಯಕ್ತಿಕವಾಗಿ ಪುಷ್ಪ, ಅರ್ ಅರ್ ಅರ್, ಯಂದಿರನ್, ಸಲಾರ್ ಇತ್ಯಾದಿ ಅದ್ದೂರಿ ಸಿನಿಮಾಗಳನ್ನು ನೋಡಿದಾಗ ಏನೂ ಅನಿಸುವುದಿಲ್ಲ. ಹೊಟ್ಟೆಕಿಚ್ಚೂ ಆಗುವುದಿಲ್ಲ. ಬದಲಿಗೆ ಅಷ್ಟು ಬಜೆಟ್, ಸ್ಟಾರ್, ಸಮಯ ಸಿಕ್ಕರೇ , ಆ ತರಹದ ವೇದಿಕೆ ಸಿಕ್ಕರೇ ನಾವೂ ಮಾಡಬಲ್ಲೆವು ಎನಿಸುತ್ತದೆ.
ಆದರೇ Upendra ವಿಷಯದಲ್ಲಿ ಹಾಗಾಗುವುದೇ ಇಲ್ಲ. ಅವರ ಸಿನಿಮಾಗಳನ್ನು ನೋಡಿದಾಗ ಈ ತರಹದ್ದು ನಮ್ಮ ತಲೆಗೆ ಹೊಳೆಯುವುದೇ ಇಲ್ಲವಲ್ಲ ಎನಿಸುತ್ತದೆ. ಅವರ ಎ, ಉಪೇಂದ್ರ ಇತ್ಯಾದಿ ಸಿನಿಮಾಗಳನ್ನು ನೋಡಿದಾಗ ಅದೆಷ್ಟೇ ತಲೆ ಕೆಡಿಸಿಕೊಂಡರೂ ನಮ್ಮ ಮೆದುಳು ಈ ತರಹ ಕೆಲಸ ಮಾಡುವುದೇ ಇಲ್ಲವಲ್ಲ ಎನಿಸಿಬಿಡುತ್ತದೆ. ಹಾಗಾಗಿ ಅವರ ಮೇಲಿನ ಹೊಟ್ಟೆಕಿಚ್ಚು ಈ ಜನ್ಮದಲ್ಲಿ ಶಮನವಾಗುವುದಿಲ್ಲ .
ಏಕೆಂದರೇ
ಅದೆಷ್ಟೆ ಬಜೆಟ್, ಸ್ಟಾರ್, ಸಮಯ ಕೊಟ್ಟರೂ ನನ್ನ ಕೈಯಲ್ಲಂತೂ ಆ ತರಹದ ಸಿನಿಮಾ ಕಲ್ಪಿಸಿಕೊಳ್ಳಲಾಗದು ಎನಿಸುತ್ತದೆ.
ಹಾಗಾಗಿ ಅವರು ಮಹಾನ್ ನಿರ್ದೇಶಕರು ಎನಿಸುತ್ತದೆ.
ಅವರ ನಿರ್ದೇಶನದ ಸಿನಿಮಾಗಳು ಎಂದರೇ ಕಾಯಬೇಕು, ನೋಡಲೇಬೇಕು ಎನ್ನುವ ತವಕ ಮೂಡುತ್ತದೆ.
#UiTheMovieOnDEC20th #UITheMovie #ಉಪೇಂದ್ರ #upendra #ಕನ್ನಡ #ಸಿನಿಮಾ #greatdirector #ನಿರ್ದೇಶಕರು
ui ಬುಕಿಂಗ್ ತೆರೆವಾಗಿದೆ. ಅಂದುಕೊಂಡಂತೆ ಕನ್ನಡದ ಸಿನಿಮಾ ಟಿಕೆಟ್ ದರ ಮುಂದುವರೆದಿದೆ. ತೆರೆವಾಗಿರುವ ಚಿತ್ರಮಂದಿರಗಳಲ್ಲಿ ಈ ಬೆಲೆ ಇದೆ.
ಇನ್ನ ಮಲ್ಟಿಪ್ಲೆಕ್ಸ್ ಪರದೆಗಳಲ್ಲಿ ಎಷ್ಟಿರುತ್ತದೋ? ಇದಾದ ಐದು ದಿನಕ್ಕೆ ಮತ್ತೆ ಇಷ್ಟೇ ಖರ್ಚು ಬರುತ್ತದಾ. .?
#UiTheMovieOnDEC20th #UITheMovie #upendra
ಬೆಳಿಗ್ಗೆ 6. 30 ಕ್ಕೇ ಮೊದಲ ಪ್ರದರ್ಶನ.
ಟಿಕೆಟ್ ಬೆಲೆ ಇನ್ನೂ ಗೊತ್ತಿಲ್ಲ.
ಈವತ್ತು ಟಿಕೆಟ್ ಬುಕಿಂಗ್ ತೆರೆದುಕೊಳ್ಳುತ್ತದೆ …
#UITheMovie #UiTheMovieOnDEC20th
ಕಿಷ್ಕಿಂದ ಕಾಂಡಂ
ನಾನು ಬಿಡುಗಡೆಯಾದ ವಾರದಲ್ಲೇ ಚಿತ್ರಮಂದಿರದಲ್ಲೇ ನೋಡಿದ ಸಿನಿಮಾ ಇದು. ಒಂದು ಸರಳ ಕತೆಯನ್ನು ಯಾವುದೇ ರೀತಿಯ ಮಸಾಲೆ ನಿರೂಪಣೆ ಇಲ್ಲದೇ ತಣ್ಣಗೆ ನೈಜವಾಗಿ ನಿರೂಪಿಸುತ್ತ ಹೋಗಿ ಕೊನೆಗೆ ಒಂದು ತಿರುವು ನೀಡಿ ಸಿನಿಮಾ ಮುಗಿಸಿದ್ದಾರೆ.
ಆವತ್ತು ನಾನು ಚಿತ್ರಮಂದಿರಕ್ಕೆ ಹೋಗಿದ್ದಾಗ ನನ್ನೊಡನೆ ಒಂದಷ್ಟು ಜನ ಕನ್ನಡಿಗರೂ ಇದ್ದರು. ಆದರೆ ಮಲಯಾಳಂ ಜನ ಜಾಸ್ತಿ ಇದ್ದದ್ದು ಕಂಡುಬಂದಿತ್ತು.
ಸಿನಿಮಾ ಶುರುವಾದ ನಂತರ ಏರಿಳಿತವಿಲ್ಲದೇ ಸಾಗುತ್ತದೆ. ಕತೆ ಸರಳವಾದದ್ದು. ಚುನಾವಣೆ ಹತ್ತಿರವಿರುವಾಗ ಮನೆಯಲ್ಲಿರುವ ಬಂದೂಕನ್ನು ಪೊಲೀಸ್ ಠಾಣೆಗೆ ಸರೆಂಡರ್ ಮಾಡಲೇಬೇಕು. ಆದರೆ ಗನ್ ಕಾಣಿಸುತ್ತಿಲ್ಲ. ಆಗಷ್ಟೇ ಮದುವೆಯಾಗಿ ಬಂದ ಸೊಸೆಗೆ ಏನೋ ಅನುಮಾನ,…
ಕೊನೆಗೊಂದು ಟ್ವಿಸ್ಟ್ ….
ಹಾಗೆ ನೋಡಿದರೆ ಮಲಯಾಳಂ ನಲ್ಲಿ ಈ ತರಹದ ಒಂದೇ ಟ್ವಿಸ್ಟ್ ಇಟ್ಟು ಇಡೀ ಸಿನಿಮಾ ಕಟ್ಟಿಕೊಟ್ಟಿರುವ ಸುಮಾರಷ್ಟು ಚಿತ್ರಗಳು ಬಂದಿವೆ.
ಇಂಥ ಸರಳ ಕತೆಯ ಸಿನಿಮಾಗಳು ನಮ್ಮಲ್ಲೇಕೆ ಬರುವುದಿಲ್ಲ ಎನ್ನುವ ಪ್ರಶ್ನೆಗೆ. ….
ಅಲ್ಲಿ ಮಂದಗತಿಯ ಸ್ಟಾರ್ ರಹಿತ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುವ ಪ್ರೇಕ್ಷಕರ ಬಳಗ ಬಹು ದೊಡ್ಡದು.
ಇದೇ ಚಿತ್ರದ ನಮ್ಮಲ್ಲಿನ ಚಿತ್ರಮಂದಿರದಲ್ಲಿನ ಗಳಿಕೆ ತೀರಾ ಕಡಿಮೆ. ಆದರೆ ಅಲ್ಲಿ ಚಿತ್ರಮಂದಿರದಲ್ಲೇ ಮೊದಲ ಹತ್ತು ದಿನದಲ್ಲಿ ಬಂಡವಾಳದ ಡಬ್ಬಲ್ ಗಳಿಕೆ ಮಾಡಿದೆ. ಈಗ ott ಯಲ್ಲಿ ಬಂದಾಗ ಸುಮಾರಷ್ಟು ಜನ ನೋಡಿದ್ದಾರೆ , ಪ್ರಶಂಸೆ ಮಾಡಿದ್ದಾರೆ.
ಇದೇ ಚಿತ್ರ ಕನ್ನಡದಲ್ಲಿ ಬಂದಿತ್ತು ಎಂದಿಟ್ಟುಕೊಳ್ಳಿ.
ಬರುವ ಮುನ್ನ
ನಿರ್ಮಾಪಕರಿಗೆ
ಸ್ಟಾರ್ / ಕಲಾವಿದರಿಗೆ
ನಿರ್ದೇಶಕರು ಕತೆ ಹೇಳಿದ್ದರೆ
ಕ್ಲೈಮಾಕ್ಸ್ ಪಾಯಿಂಟ್ ಓಕೆ,. ಆದರೇ ಅಲ್ಲಿಯವರೆಗೆ ಮಜಾ ಇಲ್ಲ ,
ಇಂಥವುಗಳು ನಮ್ಮ ಕ್ರೈಂ ಡೈರಿಯಲ್ಲೇ ಸಾಕಷ್ಟು ಬರುತ್ತವೆ,
ಕೊನೆಯ ಸಸ್ಪೆನ್ಸ್ ಊಹೆ ಮಾಡಬಹುದು , ಇನ್ನೂ ಏನಾದರೂ ಬೇಕು …
ಗ್ಲಾಮರ್ ಪಾಯಿಂಟ್ ಇಲ್ಲವೇ ಇಲ್ಲ , ಆಕ್ಷನ್ ಫೈಟ್ ಕಾಮಿಡಿ ಇಲ್ಲಾ ಎಂದರೇ ಯಾರ್ ನೋಡ್ತಾರೇ, ?
ಮಾಸ್ ಗೆ ಇವೆಲ್ಲ ಬೇಕು. ..
ಹಾಗಾದ್ರೆ ಬಿಸಿ ಸೆಂಟರ್ ನಲ್ಲಿ ಬಿಸಿನೆಸ್ಸೂ …..
ಎಂದೆಲ್ಲಾ ಹೇಳಿ ಸಾಗಹಾಕುತ್ತಿದ್ದರು.
ಹೇಗೋ ಸಿನಿಮಾ ಮಾಡಿದರೆ,
ಚಿತ್ರಮಂದಿರದಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೇ ಈಗ ಮಲಯಾಳಂ ನಲ್ಲಿದ್ದದ್ದಕ್ಕಿಂತ ಹೀನಾಯವಾಗಿರುತ್ತಿತ್ತು.
ಚಿತ್ರದಲ್ಲಿ ಚಿತ್ರಕತೆಗೆ ವೇಗ ಬೇಕಿತ್ತು , ಎಳೆತವಾಯಿತು , ಅನಗತ್ಯ ದೃಶ್ಯ (?) ಗಳನ್ನು ತೆಗೆದುಹಾಕಿದ್ದರೆ ಒಳ್ಳೆಯದಿತ್ತು ಎನ್ನುವ ವಿಮರ್ಶೆಗಳು ಬರುತ್ತಿದ್ದವು.
ಕೊನೆಯಲ್ಲಿ
ಡಬ್ಬಿಂಗ್ ಆಗಿರುವ ಸ್ಟಾರ್ ಸಿನಿಮಾಗಳು ಕಡಿಮೆ ಬೆಲೆಗೆ ಧಾರಾಳವಾಗಿ ಮನರಂಜನವಾಹಿನಿಗಳಿಗೆ ಸಿಗುತ್ತಿರುವುದರಿಂದಾಗಿ ಕನ್ನಡ ಸಿನಿಮಾವನ್ನು ಕೊಂಡುಕೊಳ್ಳುತ್ತಿರಲಿಲ್ಲ.
Ott ಯವರು ಹತ್ತಿರಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ.
ಇದೆಲ್ಲಾ ನಿಮಗೆ ಅತಿಶಯೋಕ್ತಿ ಏನಿಸಬಹುದೇನೋ ? ಆದರೆ ಇಲ್ಲಿನ ಸಧ್ಯದ ಸ್ಥಿತಿ ಹೀಗಿದೆ.
ನಾನು ನೋಡಿ ಬರೆದಿದ್ದ ಕಿಷ್ಕಿಂದ ಕಾಂಡಂ ನ ಸಿನಿಮಾಭಿಪ್ರಾಯದ ಕೊಂಡಿ ಕಾಮೆಂಟ್ ಬಾಕ್ಸ್ ನಲ್ಲಿದೆ.
ಹೋಗತ್ಲಾಗೆ!
ಇಡೀ ಭಾರತದ ಇರೋ ಬರೋ ಸ್ಟಾರ್ ಗಳೆಲ್ಲಾ ಈ ಸಿನಿಮಾದಲ್ಲಿ ಏನ್ ಮಾಡಬಹುದು ಅನ್ನೋದೇ ಕುತೂಹಲ!
ಈವಾಗ ಅಮೀರ್ ಖಾನ್ ಬೇರೆ ಸೇರ್ಕಂಡ್ ಆಯ್ತು. ಈ ಬಾಲಿವುಡ್ ಸೂಪರ್ ಸ್ಟಾರ್ ಗಳೆಲ್ಲಾ ಹಿಂದಿ film ಬಿಟ್ಟು ಹೀಗೆ ತಮಿಳು ತೆಲುಗಲ್ಲೇ ಸೆಟ್ಲ್ ಆಗ್ಬಿಡ್ತಾರಾ ಅಂತ …
ಆಮೀರ್ ಖಾನ್ – ರಜನಿ ಕಾಂತ್ ಅಭಿನಯದಲ್ಲಿ ಆವತ್ತಿಗೆ ಆತಂಕ್ ಹಿ ಆತಂಕ್ ಅನ್ನೋ ಸಿನಿಮಾ ಬಂದಿತ್ತು. ಅದು ಆವತ್ತಿಗೆ ಯಶಸ್ಸು ಕಾಣಲಿಲ್ಲವಂತೆ. ಆಮೇಲೆ ಅದೇ ಸಿನಿಮಾನ ತಮಿಳಿಗೆ ಡಬ್ ಮಾಡಿ, ಇನ್ನೂ ಸ್ವಲ್ಪ ಎಕ್ಸ್ಟ್ರಾ ಸೀನ್ ಸೇರಿಸಿ ಮತ್ತೆ ರಿಲೀಸ್ ಮಾಡಿದ್ದರಂತೆ.
ಅದೂ ಯಶಸ್ಸು ಕಾಣಲಿಲ್ಲವಂತೆ.
ಹಾಗೇ ನೋಡಿದರೇ ಮೂಲ ಭಾಷೆಯ ರಾಜ್ಯವನ್ನು ಹೊರತು ಪಡಿಸಿದರೆ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕನ್ನಡದವರ ಹಣವೇ ಪುಷ್ಪ – 2 ಗೆ ಹೆಚ್ಚು ಸಂದಾಯವಾಗಿದೆ. ಈ ಐದು ದಿನಗಳ ಗಳಿಕೆಯಲ್ಲಿ ಸಧ್ಯಕ್ಕೆ ಕರ್ನಾಟಕದಿಂದ ಸರಿ ಸುಮಾರು 58 ಕೋಟಿ ರೂಪಾಯಿಗಳಷ್ಟು ಗಳಿಕೆಯಾಗಿದ್ದರೇ, ಅದೇ ತಮಿಳುನಾಡಿನಲ್ಲಿ ಹತ್ತಿರತ್ತಿರ 47 ಕೋಟಿ ರೂಪಾಯಿಗಳ ಗಳಿಕೆಯಾಗಿದೆ. ಆದರೇ ಕೇರಳಿಗರು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಹೆಚ್ಚಾಗಿ ಒಂದಿದ್ದರೂ ಈ ಐದು ದಿನಗಳಲ್ಲಿ ಅತೀ ಕಡಿಮೆ ಗಳಿಕೆ ಅಂದರೇ ಒಟ್ಟಾರೆ 14 ಕೋಟಿ ರೂಪಾಯಿಗಳಷ್ಟೆ ಆಗಿದೆ. ಹಾಗೆಯೇ ಕೇರಳದಲ್ಲಿ ದಿನದಿನಕ್ಕೆ ಗಳಿಕೆ ಗಣನೀಯವಾಗಿ ಇಳಿಮುಖ ಕಂಡಿದೆ. ಸೋಮವಾರ ಅಂಕಿ ಅಂಶಗಳ ಪ್ರಕಾರ ಕೇವಲ 60-70 ಲಕ್ಷದಷ್ಟೇ ಗಳಿಕೆಯಾಗಿದೆ. ಅದೇ ಕರ್ನಾಟಕದಲ್ಲಿ ಸೋಮವಾರದ ಗಳಿಕೆ 5 ಕೋಟಿಗೂ ಹೆಚ್ಚು.
ಅದಕ್ಕೆ ಬಹುಶಃ
ಅತಿ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಮಾಡಿದ್ದು,
ಎರ್ರಾಬಿರ್ರಿ ಟಿಕೆಟ್ ದರ ಏರಿಸಿದ್ದು,
ಕನ್ನಡ ತಮಿಳು ತೆಲುಗು ಮಲಯಾಳಂ, ಹಿಂದಿ ಎಲ್ಲಾ ಭಾಷೆಗಳ ಆವೃತ್ತಿಗಳನ್ನೂ ಬಿಡುಗಡೆ ಮಾಡಿದ್ದು,
ಕನ್ನಡಿಗರ ಪರಭಾಷಾ ವ್ಯಾಮೋಹ
ಇತ್ಯಾದಿ ಅಂಶಗಳು ಕಾರಣವಿರಬಹುದು.
ಕನ್ನಡ ಸಿನಿಮಾ ಪ್ರಿಯರಿದ್ದಾರೆ ಈ ಫೇಸ್ಬುಕ್ ನಲ್ಲಿ. ನೀವು ಯಾವುದಾದರೂ ಬೇರೆ ಭಾಷೆಯ ಸಿನಿಮಾದ ಬಗೆಗೆ ಬರೆದಾಗ ಬೈಯುತ್ತಾರೆ , ಅಷ್ಟೇ ಅಲ್ಲ ಕನ್ನಡ ಸಿನಿಮಾ ಉಳಿಸಿ , ಬೆಳೆಸಿ ಎಂಬಂತಹ ಮಾತಾನಾಡುತ್ತಾರೆ.
ಕನ್ನಡದ ಸಿನಿಪ್ರೇಮಿಗಳ ಆ ಬೈಗುಳಸಹಿತವಾದ ಮಾತುಗಳು ಖುಷಿಯಾಗುತ್ತದೆ.
ಆದರೆ ಪ್ರತಿ ವಾರ ನಾನು ಕನ್ನಡ ಸಿನಿಮಾ ನೋಡಲು ಹೋದಾಗ ಈ ಸೀನಿಪ್ರೇಮಿಗಳು ಕಾಣಸಿಗುವುದೇ ಇಲ್ಲ ಎನ್ನುವ ಬೇಸರವೂ ಇದೆ.
ಕಳೆದ ಶುಕ್ರವಾರ ಕನ್ನಡದಲ್ಲಿ ಎರಡೂ ಕನ್ನಡ ಚಿತ್ರಗಳು ಬಿಡುಗಡಯಾದವು.
ಧೀರ ಭಗತ್ ರಾಯ್ ಮತ್ತು ಗುಂಮ್ಟಿ.
ನಾನು ಎರಡೂ ಸಿನಿಮಾಗಳನ್ನು ನೋಡಹೋದಾಗ ಚಿತ್ರತಂಡದ ಮಂದಿಯಿದ್ದರೇ ಹೊರತು ಈ ಕನ್ನಡ ಸಿನಿಪ್ರೇಮಿಗಳನ್ನು ಕಾಣಲೇ ಇಲ್ಲ. ಪ್ರತಿವಾರವೂ ಅಷ್ಟೇ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಸಂಖ್ಯೆ ನಿಜಕ್ಕೂ ಬೇಸರ ತರಿಸುವಂತಃದ್ದು.
ನಾನು ಪುಷ್ಪ 2 ನೋಡಿದ್ದು ಬಿಡುಗಡೆಯಾದ ಐದನೇ ದಿನ. ಆವತ್ತೂ ಜನರಿದ್ದರು ಎನ್ನುವುದು ಬೇರೆಯ ಮಾತು.
ಫೇಸ್ಬುಕ್ ಕನ್ನಡ ಸಿನಿಮಾ ಪ್ರೇಮಿಗಳೇ…
ದಯಮಾಡಿ ನಿಮ್ಮ ಕನ್ನಡ ಸಿನಿಮಾ ಪ್ರೇಮವನ್ನೇ ಫೇಸ್ಬುಕ್ ಗಷ್ಟೇ ಸೀಮಿತಗೊಳಿಸದಿರಿ.
ಇಲ್ಲಿ ತೋರಿಸುವ ಕನ್ನಡ ಸಿನಿಮಾ ಪ್ರೀತಿಯನ್ನು ಚಿತ್ರಮಂದಿರಕ್ಕೂ ಬರುವ ಮೂಲಕ ತೋರಿಸಿದರೆ ಕನ್ನಡ ಸಿನಿಮಾಕ್ಕೆ ದೊಡ್ಡ ಪ್ರೋತ್ಸಾಹ ಸಿಗುತ್ತದೆ.
ಹೀರೋಯಿನ್ ಗೆ ಭಯ ಆಗ್ತಿಲ್ಲ ಅನ್ನೋದೊಂದೇ ಸಮಾಧಾನ.
ಡಿಸೆಂಬರ್ 20 ,2024
24 ವರ್ಷಗಳ ಹಿಂದೆಯೇ ನಮ್ಮ Upendra , A ಚಿತ್ರದಲ್ಲಿ ನಾಯಕಿಯ ಶಿರ ಛೇಧ, ರಕ್ತ ಇತ್ಯಾದಿಗಳನ್ನ ಪೋಸ್ಟರ್ ನಲ್ಲೆ ಹಾಕಿದ್ದರು.
ಈಗ ಅಂತಹ ಪಿಪಾಸುಗುಣ ಇಲ್ಲ. ಸಾಫ್ಟ್ ಆಗಿದ್ದಾರೆ. ಆದರೆ ಬೇರೆಯವರ ರಕ್ತದೋಕುಳಿ ಪೋಸ್ಟರ್ ನಲ್ಲಿ ಎರಚಾಡುತ್ತಿದೆ.
ಉಪ್ಪಿ ಯಾವತ್ತಿಗೂ ಕಾಲಕ್ಕೂ ಮುಂದೆ. …
ಸುಮಾರಷ್ಟು ಸಲ ನೋಡಿರುವ ಪ್ರತಿ ಸಾರಿಯೂ ನೋಡಿದಾಗಲೂ ಎಂಜಾಯ್ ಮಾಡಿರುವ ಸಿನಿಮಾ ಇದು.
ಅದರಲ್ಲೂ ಈವಮ್ಮನ ಹೆಸರೂ ಈವತ್ತಿಗೂ ಗೊತ್ತಿಲ್ಲ. ಆದ್ರೆ acting ಸ್ಟೈಲ್ ಮಾತ್ರ ಚಿಂದಿ.
Film ಹೆಸರು ಗೊತ್ತಾಯ್ತಾ ???
#UITheMovie #uppiboss
#Pushpa2TheRule #pushpa2 #BoxOffice #pushpa2movie #karnataka_focus #ಪುಷ್ಪ2
#coolie #CoolieTitleTeaser #SuperstarRajinikanth #Rajanikanth #Rajnikanth #amirkhan #styleking #ಕೂಲಿ #ರಜನಿಕಾಂತ್ #ಅಮೀರ್
#kishkindhakandam #malayalamcinema
#UiTheMovieOnDEC20th #ನಿರ್ದೇಶಕರು #ಉಪೇಂದ್ರ #max #kichchasudeep #kichchacreations
#UiTheMovieOnDEC20th #ನಿರ್ದೇಶಕರು #ಉಪೇಂದ್ರ #ಕನ್ನಡ
#UiTheMovieOnDEC20th #PVRINOX
#UiTheMovieOnDEC20th
Related Stories
December 19, 2024
December 19, 2024
November 26, 2024