Kannada movies 2024
ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳು 2024 ಬಿಗ್ ಹಿಟ್ ಸತತ ಸೋಲುಗಳಿಂದ ಕಂಗೆಟ್ಟಿರುವ ಕನ್ನಡ ಚಿತ್ರರಂಗ ಕೆ 4 ಬ್ಲಾಕ್ ಬಸ್ಟರ್ ಚಿತ್ರ ಯಶಸ್ಸು ಕಂಡಿದೆ ದುನಿಯಾ ವಿಜಯ್ ನಿರ್ದೇಶನದ ಭೀಮ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಶ್ರೀ ಮುರುಳಿ ಅಭಿನಯದ ಭಗೀರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬೈರಾತಿ ರಣಗಲ್ ಸೊರಗುತ್ತಿದ್ದ ಸ್ಯಾಂಡಲ್ವುಡ್ ಗೆ ಮರು ಜೀವ ತಂದು ಕೊಟ್ಟಿದೆ
ಪ್ರಾರಂಭದಲ್ಲಿ ತೆರೆ ಕಂಡ ಭೀಮ ಸಿನಿಮಾ 3 ದಿನಕ್ಕೆ 15 ಕೋಟಿಗೂ ಹೆಚ್ಚು
ಕಲೆಕ್ಷನ್ ಮಾಡಿದೆ
ಕೃಷ್ಣಂ ಪ್ರಣಯ ಸಖಿ 20 ಕೋಟಿ ಕಲೆಕ್ಷನ್
ಭಗೀರ 13 ಕೋಟಿ
ಬೈರಾತಿ ರಣಗಲ್ 10 ಕೋಟಿ ಕಲೆಕ್ಷನ್ ಮಾಡಿದೆ
ಮತ್ತು ಉತ್ತಮ imdb ರೇಟಿಂಗ್ ಹೊಂದಿದೆ 2024 ಕನ್ನಡ ಚಿತ್ರರಂಗದ
ಪಾಲಿಗೆ ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರ ರಸಿಕರಿಗೆ ನೀಡಿದ ವರ್ಷ
ಹಾಗೆಯೆ ಹಳೆ ಸಿನಿಮಾ ಕನ್ನಡಕೆ ರಿಮೇಕ್ ಚಿತ್ರಗಳನ್ನು
ಇಷ್ಟು ಚೆನ್ನಾಗಿ ರೀಮೇಕ್ ಮಾಡಲು ಸಾಧ್ಯವೇ ಎನಿಸುವುದರಲ್ಲಿ ಅಣ್ಣಯ್ಯ ಚಿತ್ರವೂ ಒಂದು. ನಾನಂತೂ ಹತ್ತಕ್ಕೂ ಹೆಚ್ಚು ಸಲ ನೋಡಿದ ಚಿತ್ರವಿದು.
ಮೊದಲಿಗೆ ಮಣಿಲಾಲ್ ಬ್ಯಾನರ್ಜಿ ಬರೆದ ಕಾದಂಬರಿ ಸ್ವಯಂಸಿದ್ಧ ಆಧಾರಿತ ಚಿತ್ರ ಅರ್ಧಾಂಗಿ. 1955 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ರಾಷ್ಟ್ರಪ್ರಶಸ್ತಿ ಪಡೆದಿತ್ತು.
ಅದಾದ ನಂತರ 1956 ರಲ್ಲಿ ಪೆನ್ನಿನ್ ಪೆರುಮೈ ಹೆಸರಿನಲ್ಲಿ ತಯಾರಾಗಿತ್ತು.
ಆನಂತರ ಹಿಂದಿಯಲ್ಲಿ ಇದೇ ಚಿತ್ರ ಬಹುರಾಣಿ ಹೆಸರಿನಲ್ಲಿ 1963 ರಲ್ಲಿ ರೀಮೇಕ್ ಆಗಿತ್ತು. ಗುರುದತ್ ನಾಯಕರಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದರು.
ಅದಾದ ನಂತರ ಕನ್ನಡದಲ್ಲಿ ನಮ್ಮ ಹೆಮ್ಮೆಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1969 ರಲ್ಲಿ ಮಲ್ಲಮ್ಮನ ಪವಾಡ ಹೆಸರಿನಲ್ಲಿ ಇದೇ ಕತೆಯ ಚಿತ್ರ ನಿರ್ಮಾಣವಾಗಿತ್ತು. ಇದು ನಟ ಭಯಂಕರ ವಜ್ರಮುನಿಯವರ ಮೊದಲ ಚಿತ್ರ. ಅಣ್ನಾವ್ರು-ಬಿ ಸರೋಜಾದೇವಿ ಅಭಿನಯದ ಈ ಚಿತ್ರ ಬಿ.ಪುಟ್ತಸ್ವಾಮಯ್ಯ ಅವರ ಅನುವಾದಿತ ಕಾದಂಬರಿ ಆಧಾರಿತವಾಗಿತ್ತು.
ಅನಂತರ ಇದೇ ಕತೆಯನ್ನಾಧರಿಸಿ ಬೆಂಗಾಲಿಯಲ್ಲಿ ಸ್ವಯಂಸಿಧ ಸಿನಿಮಾ ನಿರ್ಮಾಣವಾಗಿತ್ತು. ಈ ಚಿತ್ರವನ್ನು ಸುಶೀಲ್ ಮುಖರ್ಜಿ ನಿರ್ದೇಶನ ಮಾಡಿದ್ದರು. ಈ ಚಿತ್ರ 1975 ರಲ್ಲಿ ಬಿಡುಗಡೆಯಾಗಿತ್ತು.
1981 ರಲ್ಲಿ ಜ್ಯೋತಿ ಹೆಸರಿನಲ್ಲಿ ಹಿಂದಿಯಲ್ಲಿ ಇದೇ ಚಿತ್ರ ನಿರ್ಮಾಣವಾಯಿತು. ಪ್ರಮೋದ್ ಚಕ್ರವರ್ತಿ ಈ ಚಿತ್ರವನ್ನು ನಿರ್ದೇಶನ ಮಾಡಿದರೇ ಜಿತೇಂದ್ರ ಮತ್ತು ಹೇಮಮಾಲಿನಿ ಮುಖ್ಯ ಭೂಮಿಕೆಯಲ್ಲಿದ್ದರು.
1987 ರಲ್ಲಿ ಕೆ. ಭಾಗ್ಯರಾಜ್ ತಾವೇ ನಾಯಕರಾಗಿ ನಿರ್ದೇಶಕರಾಗಿ ಎಂಗ ಚಿನ್ನ ರಾಸ ಹೆಸರಿನಲ್ಲಿ ತಮಿಳಿನಲ್ಲಿ ಇದೇ ಕತೆಯನ್ನು ಸಿನಿಮಾವನ್ನಾಗಿಸಿದರು. ಈ ಸಿನಿಮಾ ಆ ಕಾಲಕ್ಕೆ ಸೂಪರ್ ಡೂಪರ್ ಹಿಟ್ ಆದ ಚಿತ್ರ.
1992 ರಲ್ಲಿ ಎಂಗ ಚಿನ್ನ ರಾಸ ಆಧರಿಸಿ ಹಿಂದಿಯಲ್ಲಿ ಬೇಟಾ ಚಿತ್ರ ನಿರ್ಮಾಣವಾಯಿತು. ಇಂದ್ರಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯಿಸಿದ್ದರು. ಸಿನಿಮಾದ ಹಾಡುಗಳು ಮತ್ತು ಸಿನಿಮಾ ಸೂಪರ್ ಹಿಟ್.
1992 ರಲ್ಲೇ ಕನ್ನ್ಡಡದಲ್ಲಿ ಅಣ್ಣಯ್ಯ ಬಂದದ್ದು. ಹಾಡು ಸಿನಿಮಾ ಅಭಿನಯ ಎಲ್ಲವೂ ಸೂಪರ್. ರವಿಚಂದ್ರನ್ ಚಿತ್ರಕ್ಕೆ ಬೇರೆಯದೇ ಆದ ಆಯಾಮ ನೀಡಿದ್ದರು . ಹಂಸಲೇಖರ ಸಾಹಿತ್ಯ ಮತ್ತು ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ಸಿನಿಮಾವನ್ನು ಉತ್ತುಂಗಕ್ಕೆ ಏರಿಸಿತ್ತು.
1993 ರಲ್ಲಿ ಅಬ್ಬಾಯಿಗಾರು ಹೆಸರಿನಲ್ಲಿ ಇದೇ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಯಿತು. ವೆಂಕಟೇಶ್ ಮತ್ತು ಮೀನಾ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರ ಸೂಪರ್ ಹಿಟ್.
1998 ರಲ್ಲಿ ಒರಿಯಾ ಭಾಷೆಯಲ್ಲಿ ಸಂತನ್ ಹೆಸರಿನಲ್ಲಿ ಇದೇ ಚಿತ್ರ ರೀಮೇಕ್ ಆಗಿದೆ.
ನನಗೆ ಅಚ್ಚರಿಯ ವಿಷಯವೆಂದರೇ ಒಂದೇ ಕತೆ ಅದೆಷ್ಟು ಭಾಷೆಗಳಲ್ಲಿ ಬಂದರೂ ಅದು ಯಶಸ್ಸಾಗಿರುವುದು. ಈಗಲೂ ನಾನು ಅಣ್ನಯ್ಯ ಆವಾಗಾವಾಗ ನೋಡುತ್ತೇನೆ. ತಾಯಿಯ ಬಗೆಗೆ ಅತಿಯಾದ ಪ್ರೀತಿಯ ಮಗ ತಾನು ಸಾಯುತ್ತಿದ್ದಾಗಲೂ ಆಕೆಯನ್ನು ರಕ್ಷಿಸಲು ಬರುವುದು ಕೆಲವರಿಗೆ ಸಿನಿಮೀಯ ಎನಿಸಲು ಬಹುದು ಅಥವ ಅತಿರೇಕ ಎನಿಸಬಹುದೇನೋ..? ಆದರೇ ನನಗಂತೂ ಕ್ಲೈಮ್ಯಾಕ್ಶ್ ಕಣ್ಣೀರು ತರಿಸುತ್ತದೆ. ಕೊನೆಯಲ್ಲಿ ರವಿಚಂದ್ರನ್,
ಅಮ್ಮಾ ಆಸ್ತಿಯೆಲ್ಲಾ ನಿನ್ನ ಹೆಸರಿಗೆ ಬರೆದಿದ್ದೇನೆ,, ನಾವು ಎಲ್ಲಾದರೂ ಬದುಕಿಕೊಳ್ಳುತ್ತೇವೆ ಎಂದಾಗ ಮಗನ ಕಾಲು ಹಿಡಿಯುವ ಅಮ್ಮ
ನನಗೆ ಆಸ್ತಿ ಬೇಡ.. ನನ್ನ ಮಗ ಬೇಕು
ಎನ್ನುವ ಸಂಭಾಷಣೆಗೆ ಕಣ್ಣೀರಾಗಿದ್ದೇನೆ.
ನಿಜಕ್ಕೂ ರೀಮೇಕ್ ಸ್ವಮೇಕೋ ..? ಅದ್ಭುತ ಸಿನಿಮಾಗಳು, ಆ ಭಾವಗಳನ್ನು ನಮಗೆ ನೀಡಿದ ಚಿತ್ರತಂಡಕ್ಕೆ ನಾನು ಯಾವತ್ತಿಗೂ ಋಣಿ.
ಕನ್ನಡದಲ್ಲಿ ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳ ಸಂಖ್ಯೆ 8. ಅದರಲ್ಲಿ ಒಂದು ಸಿನಿಮಾ ಭಾನುವಾರವಷ್ಟೇ ಪ್ರದರ್ಶನ ಇಟ್ಟುಕೊಂಡಿದೆ.
ಮರ್ಯಾದೇ ಪ್ರಶ್ನೆ,. ಆರಾಮ್ ಅರವಿಂದ್ ಸ್ವಾಮಿ , ಪ್ರಭುತ್ವ ಸಿನಿಮಾದ ತಂಡಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಅಲ್ಲಲ್ಲಿ ಬಂದ ವಿಮರ್ಶೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಆದರೆ ಉಳಿದ ನಾಲ್ಕು ಸಿನಿಮಾದ ತಂಡ ಆ ಕೆಲಸ ಮಾಡುತ್ತಿದೆಯಾ ? ನನ್ನ ಕಣ್ಣಿಗಂತೂ ಬಿದ್ದಿಲ್ಲ. ಕಷ್ಟಪಟ್ಟು ಹಣ ಖರ್ಚು ಮಾಡಿ ಸಮಯ ಕಳೆದು ಸಿನಿಮಾ ಮಾಡಿ ಕೊನೆಯ ನಿರ್ಣಾಯಕ ಹಂತದಲ್ಲಿ ತಟಸ್ಥವಾಗಿ ಬಿಟ್ಟರೇ ಹೇಗೆ?
ಸಿನಿಮಾ ನಿರ್ಮಾಣ ಮಾಡುವುದು ಒಂದು ಲೆಕ್ಕವಾದರೆ ಬಿಡುಗಡೆ ಪೂರ್ವ ಬಿಡುಗಡೆಯ ನಂತರ ಓಡಾಡುವುದು ಒಂದು ಲೆಕ್ಕ. ಸುಮ್ಮನೆ ಬುಕ್ ಮೈ ಶೋ ನಲ್ಲಿ ಪಟ್ಟಿ ಮಾಡಿ ಚಿತ್ರಮಂದಿರದಲ್ಲಿ ಪ್ರದರ್ಶನ ಇಟ್ಟುಕೊಂಡರೆ ಪ್ರೇಕ್ಷಕರು ಬಂದು ಬಿಡುತ್ತಾರಯೇ?
ಬಿಡುಗಡೆಯ ಸಮಯದಲ್ಲಿ ಅದೊಂದು ಒತ್ತಡ ಇರುತ್ತದೆ. ಅಷ್ಟೇ ಅಲ್ಲ , ಪ್ರೇಕ್ಷಕರು ಬಾರದಿದ್ದಾಗ ಮಾಧ್ಯಮಗಳಿಂದ ಅಂತಹ ಉತ್ತೇಜನ ಬರದಿದ್ದಾಗ ಬೇಸರವೂ ಆಗುತ್ತದೆ. ಆದರೆ ಚಿತ್ರಕರ್ಮಿ ಧೃತಿಗೆಡಬಾರದು. ಕೊನೆಯವರೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಪ್ರಯತ್ನಿಸಲೇಬೇಕು.
ಸಿನಿಮಾ ನಮ್ಮ ಕೂಸು. ಯಾರೇ ನಿರ್ಲಕ್ಷ್ಯ ಮಾಡಿದರೂ ನಾವು ಮಾಡುವ ಹಾಗಿಲ್ಲ.
ಉಚಿತವಾಗಿರುವ ಸಾಮಾಜಿಕ ಜಾಲತಾಣಗಳನ್ನು ತೀರಾ ಆತ್ಮೀಯರನ್ನು ಗೊತ್ತಿರುವ ಮಾಧ್ಯಮಮಿತ್ರರನ್ನು ಬಳಸಿಕೊಳ್ಳಿ.
ನಾನು ಗಮನಿಸಿದ ಹಾಗೆ ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ಕನ್ನಡ ಚಿತ್ರವೆಂದರೆ ಅದು ಮಾರ್ಟಿನ್ ಎನ್ನಬಹುದು.
ಚಿತ್ರಮಂದಿರದಲ್ಲಿ ಇದ್ದಾಗಲೇ ಟ್ರೋಲ್ಸ್ ಮಾಡಲಾಗಿತ್ತಾದರೂ ಈಗ Amazon Prime ನಲ್ಲಿ ಬಂದ ಮೇಲೇ ಕನ್ನಡಿಗರು ಮಾತ್ರವಲ್ಲ, ಎಲ್ಲಾ ಭಾಷೆಯವರೂ ಟ್ರೋಲ್ ಮಾಡಿದ್ದಾರೆ.
ಹಾಗಾದರೆ ಅಂಥದ್ದೀನಿದೆ ಸಿನಿಮಾದಲ್ಲಿ ಕೆಟ್ಟದ್ದು.? ಅಥವಾ ಅದಕ್ಕಿಂತ ಕೆಟ್ಟದೆನಿಸುವ ಸಿನಿಮಾ ಬಂದಿಲ್ಲವೇ?
ಹಾಗೆ ನೋಡಿದರೆ ಧ್ರುವ ಸರ್ಜಾ ರ ಅಭಿನಯವೇ ತುಂಬಾ ಜನಕ್ಕೆ ಇರ್ರಿಟೇಟ್ ಮಾಡಿದೆ. ಜೊತೆಗೆ ವರ್ಷಗಟ್ಟಲೆ ಕಾಯಿಸಿದ್ದು ಕೋಟ್ಯಂತರ ಹಣ ವ್ಯಯಿಸಿದ್ದು, 13 ಭಾಷೆಗಳಲ್ಲಿ ಬಿಡುಗಡೆ ಎಂದೆಲ್ಲಾ ಹೇಳಿದ್ದು ಇದಕ್ಕೆ ಪರೋಕ್ಷ ಕಾರಣವಿರಬಹುದು.
ಅದರಲ್ಲೂ ಪರ ಭಾಷೆಯವರಿಗೆ ಅದೇನು ಕೋಪ ಇತ್ತೋ ಅವರ ಯೂ ಟ್ಯೂಬ್,. ಫೇಸ್ಬುಕ್ ಪುಟಗಳಲ್ಲಿನ ಪೋಸ್ಟ್ ಗಳನ್ನು ನೋಡಿದರೆ ಅದಕ್ಕೆ ಬಂದಿರುವ ಕಾಮೆಂಟ್ ಗಳನ್ನು ನೋಡಿದರೆ “ಯಪ್ಪಾ ” ಎನಿಸುತ್ತದೆ.
ಮಾರ್ಟಿನ್ ಚಿತ್ರದಲ್ಲಿ ಆಕ್ಷನ್ ತುಂಬಾ ಚೆನ್ನಾಗಿದ್ದವು , ಆದರೆ ಅದರ ಹಿನ್ನೆಲೆಗೆ ಬೇಕಿದ್ದ ಟೆನ್ಶನ್ ಇರಲಿಲ್ಲ. ಹಾಗೆಯೇ ತುಂಬಾ ಲಾಜಿಕ್ ಬಗೆಗೆ ತಲೆಯೇ ಕೆಡಿಸಿಕೊಳ್ಳದೇ ಅದನ್ನು ನೆಗ್ಲೆಕ್ಟ್ ಮಾಡಿದ್ದು ಕಾರಣವಿರಬಹುದೇನೋ?
ಇಂಡಿಯನ್ 2, ಗುಂಟೂರ್ ಕಾರಂ , ದಿ ಗೋಟ್ , ಕಂಗುವ , ದೇವರ , ಬಡೇ ಮಿಯಾ ಛೋಟೆ ಮಿಯಾ, ಭೂಲ್ ಬುಲಯ್ಯ 3. …ಹೀಗೆ ಸುಮಾರಷ್ಟು ಅದ್ದೂರಿ ಸ್ಟಾರ್ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಿವೆ.
ಆದರೆ ಅದೆಲ್ಲವನ್ನೂ ಮೀರಿ martin ಟ್ರೋಲ್ ಗೆ ಒಳಗಾಗಿದೆ.
ಝೀಬ್ರಾ
ಅವಧಿಃ 2 ಘಂಟೆ 44 ನಿಮಿಷಗಳು
ತಾರಾಗಣಃ ಸತ್ಯದೇವ್, Dhananjaya Amrutha Iyengar , Priya BhavaniShankar
ನಿರ್ದೇಶಕರುಃ ಈಶ್ವರ್ ಕಾರ್ತಿಕ್
ಕೆಲವು ದಿನಗಳ ಹಿಂದೆ ಲಕ್ಕಿ ಭಾಸ್ಕರ್ ಸಿನಿಮಾ ಬಂದಿತ್ತು. ಅದೇ ರೀತಿಯ ಬ್ಯಾಂಕಿಂಗ್ ಸ್ಕ್ಯಾಂ ಕುರಿತಾದ ಚಿತ್ರವಿದು. ಚಿತ್ರದ ನಾಯಕ ಸೂರ್ಯ ಬ್ಯಾಂಕ್ ಉದ್ಯೋಗಿ. ಆತನ ಪ್ರೇಯಸಿ ಸ್ವಾತಿ ಕೂಡ ಮತ್ತೊಂದು ಬ್ಯಾಂಕ್ ಉದ್ಯೋಗಿ. ಸ್ವಾತಿಯ ಒಂದು ಟೈಪಿಂಗ್ ಎರರ್ ನಿಂದಾಗಿ ಸಮಸ್ಯೆ ಎದುರಾದಾಗ ಬ್ಯಾಂಕಿನ ಒಳಹೊರಗುಗಳನ್ನು ತಿಳಿದ ಸೂರ್ಯ ತನ್ನ ಬುದ್ದಿವಂತಿಕೆ ಉಪಯೋಗಿಸಿ ಪರಿಹರಿಸುತ್ತಾನೆ. ಆದರೇ ಮುಂದೇ ಅದೇ ಮತ್ತಷ್ಟು ಅವಘಡಗಳಿಗೆ ಕಾರಣವಾಗಿ ಆದಿಯ ಐದು ಕೋಟಿರೂಪಾಯಿಗಳು ಬೇರೆಡೇಗೆ ವರ್ಗಾವಣೆ ಆಗಿಬಿಡುತ್ತದೆ. ಆದಿ ನಾಲ್ಕು ದಿನಗಳಲಿ ತನ್ನ ಐದು ಕೋಟಿಯನ್ನು ವಾಪಸ್ಸು ಕೊಡದಿದ್ದರೇ ಸೂರ್ಯನ ತಾಯಿಯನ್ನು ಕೊಲ್ಲುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾನೆ.
ನಾಲ್ಕು ದಿನಗಳಲ್ಲಿ ಐದು ಕೋಟಿಗಳನ್ನು ಹೇಗೆ ಹೊಂದಿಸುತ್ತಾನೆ ಎನ್ನುವುದೇ ಮುಂದಿನ ಕತೆ.
ಆದಿಯಾಗಿ ಧನಂಜಯ ಅವರಿಗೆ ಸಖತ್ ಸ್ಕೋಪ್ ಸಿಕ್ಕಿದೆ. ಇಂಟ್ರಡಕ್ಸನ್ ಫೈಟ್ ಹಾಡುಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುವ ಧನಂಜಯ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸತ್ಯದೇವ್ ಮಧ್ಯಮವರ್ಗದ ಯುವಕನಾಗಿ, ಬ್ಯಾಂಕ್ ಉದ್ಯೋಗಿಯಾಗಿ ಗಮನ ಸೆಳೆಯುತ್ತಾರೆ. ಚಿತ್ರದ ಗುಣಮಟ್ತದಲ್ಲಿ ರಾಜಿಯಾಗಿಲ್ಲ.. ಇಡೀ ಚಿತ್ರಣ ಶ್ರೀಮಂತಿಕೆಯಿಂದ ಕೂಡಿದೆ.
ಚಿತ್ರಕ್ಕೆ ಕನ್ನಡದ ರವಿ ಬಸ್ರುರು ಸಂಗೀತ ಒದಗಿಸಿದ್ದಾರೆ. ಮಾಮೂಲಿ ಅವರ ಶೈಲಿಯ ಅಬ್ಬರ ಚಿತ್ರದುದ್ದಕ್ಕೂ ಕಾಣಿಸುತ್ತದೆ. ಗರುಡ ರಾಂ, ಅಮೃತ ಅಯ್ಯಂಗಾರ್ ಕೂಡ ಚಿತ್ರದಲ್ಲಿದ್ದಾರೆ.
ಪ್ರಾರಂಭದಲ್ಲಿ ಕೂರಿಸಿಕೊಳ್ಳುವ ಚಿತ್ರ ಮಧ್ಯಂತರದ ನಂತರ ನಿಧಾನವಾಗುತ್ತದೆ. ಬಹುಶಃ ಚಿತ್ರದ ಉದ್ದವೇ ಅದಕ್ಕೆ ಕಾರಣವಿರಬಹುದು. ಹಾಗೆಯೇ ನಿರೂಪಣೆ ಸ್ವಲ್ಪ ಗೊಂದಲ ಎನಿಸುತ್ತದೆ. ಬ್ಯಾಂಕಿಂಗ್ ಒಳ ಹೊರಗು ಗೊತ್ತಿರುವವರಿಗೆ ಸುಲಭವಾಗಿ ಅರ್ಥವಾಗಬಹುದೇನೋ..? ಚಿತ್ರದ ಶೀರ್ಷಿಕೆ ಬರುವುದೇ ಸುಮಾರು ಅರ್ಧ ಘಂಟೆ ಆದನಂತರ. ಹಾಗೆಯೇ ಆದಿಯ ಕಥೆಯೇ ನಾಯಕ ಸೂರ್ಯನ ಕಥೆಗಿಂತ ಜಾಸ್ತಿಯಾಯಿತು ಎನಿಸುತ್ತದೆ. ಮನಿ ಹೀಸ್ಟ್ ಸರಣಿಯ ದೃಶ್ಯವನ್ನು ಹೋಲುವ ದೃಶ್ಯವೂ ಚಿತ್ರದಲ್ಲಿ ಬಂದು ಹೋಗುತ್ತದೆ. ಕೊನೆಯಲ್ಲಿ ಎಲ್ಲವೂ ಸುಖಾಂತವಾದರೂ ಏನು ನಡೆಯಿತು ಎನ್ನುವ ಗೊಂದಲ ನನ್ನನ್ನಂತೂ ಕಾಡಿದ್ದು ಸತ್ಯ.
ಕನ್ನಡದ ಡಾಲಿ ಧನಂಜಯ್, ಅಮೃತ ಅಯ್ಯಂಗಾರ್, ಗರುಡರಾಂ, ರವಿ ಬಸ್ರುರು ಅವರಿಗಾಗಿ ಒಮ್ಮೆ ನೋಡಬಹುದಾದ ಚಿತ್ರವಿದು.
ಬಿಡುಗಡೆಯಾದ ತಿಂಗಳೊಳಗೆ OTT ಯಲ್ಲಿ ಸಿನಿಮಾ ಬಂದರೇ ಏನಾಗುತ್ತದೆ?
ಚಂದಾದಾರರು ನೋಡುತ್ತಾರೆ.
ಕರ್ನಾಟಕದಲ್ಲಿ ಅದೆಷ್ಟು ಜನ ott ಗಳಿಗೆ ಚಂದಾದಾರರಾಗಿರಬಹುದು?
ಹಾಗೆ ನೋಡಿದರೆ ott ಚಂದಾದಾರರುಗಳು ದುಡ್ಡು ಕೊಟ್ಟಿರುತ್ತಾರೆ. ಅವರ ಒತ್ತಡದ ಕೆಲಸದ ನಡುವೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದು ಅಷ್ಟರಲ್ಲೇ ಇದೆ.
ಇಷ್ಟಕ್ಕೂ ನಾವುಗಳು ಸಿನಿಮಾ ಮಂದಿ ವೃತ್ತಿಯಲ್ಲಿರುವವರನ್ನು ನಂಬಿಕೊಂಡರೆ ಓಪನಿಂಗ್ ಸಿಕ್ಕುವುದಿಲ್ಲ. ಅವರುಗಳು ವಾರಂತ್ಯದ ರಜಾ ಕಾಯುತ್ತಾರೆ. ಅವರುಗಳಲ್ಲಿ ಬಿಡುಗಡೆಯ ದಿನವೇ ನೋಡಲೇಬೇಕು ಎಂದುಕೊಳ್ಳುವವರು ಕಡಿಮೆಯೇ. ಹಾಗೆಯೇ ಸಿಕ್ಕ ಸಿಕ್ಕ ಸಿನಿಮಾ ನೋಡುವ ಚಾನ್ಸ್ ತೆಗೆದುಕೊಳುವುದಿಲ್ಲ. ಅವರು ಟ್ರೈಲರ್ ನೋಡಿ,. ಅದರ ಬಗೆಗೆ ಓದಿ ನೋಡಿ ತಿಳಿದುಕೊಂಡು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರ ವಿಮರ್ಶೆ rating ನೋಡಿಕೊಂಡು ಟಿಕೆಟ್ ಬುಕ್ ಮಾಡುತ್ತಾರೆ.
ಆದರೆ ದಿನಗೂಲಿ ನೌಕರರು ಹಾಸ್ಟೆಲ್ ಪಿಜಿಯಲ್ಲಿರುವ ವಿದ್ಯಾರ್ಥಿಗಳು, ರಾತ್ರಿ – ಬೆಳಿಗ್ಗಿನ ಪಾಳಿ ಪ್ರಕಾರ ಕೆಲಸ ಮಾಡುವವರು ಹೆಚ್ಚಾಗಿ ಸಿನಿಮಾ ನೋಡುವ ಚಾನ್ಸ್ ತೆಗೆದುಕೊಳ್ಳುತ್ತಾರೆ. ಅವರಿಗೆ ಕೆಲಸ ಮುಗಿದ ಮೇಲೆ ಸಮಯ ಕಳೆಯಲು ಇರುವ ಮನರಂಜನೆಯಲ್ಲಿ ಸಿನಿಮಾ ಮೊದಲ ಆದ್ಯತೆ. ಇವರುಗಳು ದುಡ್ಡು ಕೊಟ್ಟು ಚಂದಾದಾರರಾಗುವುದು ಕಡಿಮೆಯೇ.
ಆದರೆ ಒಮ್ಮೆಲೇ ott ಯಲ್ಲಿ ಪ್ರಸಾರವಾದ ತಕ್ಷಣ ಅದನ್ನು ರಿಪ್ ಮಾಡುವ ಇಂಟರ್ನೆಟ್ ನಲ್ಲಿನ ಕಳ್ಳರು ಸೀದಾ ಅದನ್ನು ಡೌನ್ಲೋಡ್ ಆಗುವ ಅಂತರ್ಜಾಲದಲ್ಲಿ ಹಾಕಿ ಬಿಡುತ್ತಾರೆ. ಅದು ಟಾರೆಂಟ್, ಟೆಲಿಗ್ರಾಂ ಇತ್ಯಾದಿಗಳು ಯಾವುದಾದರೂ ಆಗಿರಬಹುದು. ಅಲ್ಲಿ ಫ್ರೀ ಸಿಗುತ್ತದೆ. ಆಗ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುವ ವರ್ಗದ ಜನರು ಉಚಿತವಾಗಿ ನೋಡುತ್ತಾರೆ.
ಇದರಿಂದ ದುಡ್ಡು ಕೊಟ್ಟು ನೋಡುವ ಅವರನ್ನು ನಾವೇ ದಿಕ್ಕು ತಪ್ಪಿಸಿದಂತೆ ಆಗುತ್ತದೆ. ಅಲ್ಲದೇ ಅವರುಗಳೂ ಎಲ್ಲಾ ಚಿತ್ರಗಳನ್ನೂ ಒಂದೇ ತಕ್ಕಡಿಯಲ್ಲಿ ಹಾಕುತ್ತಾರೆ. ಎಲ್ಲವೂ ಟೆಲಿಗ್ರಾಂ ಇತ್ಯಾದಿಗಳಿಗೆ ಬಂದೇ ಬರುತ್ತಾರೆ ಎಂದೇ ನಂಬುತ್ತಾರೆ.
ಅಂತಹ ಸಂದರ್ಭದಲ್ಲಿ ಒಳ್ಳೆಯ ಕಂಟೆಂಟ್ ಇರುವ ಆದರೆ ಸ್ಟಾರ್ ರಹಿತ ಚಿತ್ರಗಳಿಗೆ ಚಿತ್ರಮಂದಿರದಲ್ಲೂ ಜನರಿಲ್ಲದೆ ott ಗಳೂ ಕೊಂಡುಕೊಳ್ಳದೆ ಅನಾಥರಾಗುತ್ತವೆ. ಅವುಗಳನ್ನು ಕದ್ದು ಡೌನ್ಲೋಡ್ ಗೆ ಹಾಕುವುದಕ್ಕೂ ಕಳ್ಳರು ಹಿಂದೆ ಮುಂದೆ ನೋಡುತ್ತಾರೆ.ಏಕೆಂದರೆ ಅವರಿಗೂ ದೊಡ್ಡ ಸಿನಿಮಾಗಳಿದ್ದರೆ ವ್ಯವಹಾರ. ಹೀಗಾಗಿ ಉತ್ತಮ ಗಟ್ಟಿಕತೆಯ ಚಿತ್ರಗಳು ಮುಖ್ಯವಾಹಿನಿಗೆ ಬರುವುದೇ ಇಲ್ಲ.
ಹಾಗಾಗಿ ದೊಡ್ಡ ದೊಡ್ಡ ಸಿನಿಮಾಗಳು ಒಂದಷ್ಟು ದಿನ ತಡವಾಗಿ ಬಂದರೆ ವೀಕ್ಷಣೆಯ ದೃಷ್ಟಿಯಲ್ಲೂ ಗಳಿಕೆಯ ದೃಷ್ಟಿಯಲ್ಲೂ ಚಿತ್ರರಂಗದ ಹಿತದೃಷ್ಟಿಯಲ್ಲೂ ಒಳ್ಳೆಯದು ಎನಿಸುತ್ತದೆ.
Martin amazon prime ನಲ್ಲಿದೆ. ಈಗ ನೋಡಿದವರ ಒದ್ದಾಟ ಹೇಳತೀರದು.
ಹಾಗೆ ನೋಡಿದರೆ martin ಕಥೆ ನನಗಿಷ್ಟವೇ ಆಗಿತ್ತು. ತಾನ್ಯಾರು ಎಂಬುದೇ ಗೊತ್ತಿಲ್ಲದ ಮನುಷ್ಯನ ಅಸ್ತಿತ್ವದ ಹುಡುಕಾಟ ಒಳ್ಳೆಯ ಕಥಾವಸ್ತುವೇ. ನೀವು ಜಾಕಿಚ್ಚಾನ್ ಅಭಿನಯದ who am i ನೋಡಿರಬಹುದು. ಆತನಿಗೆ ತಾನ್ಯಾರು ಎಂಬುದೇ ಗೊತ್ತಿಲ್ಲ. ಹಾಗಾಗಿ ತನ್ನನ್ನ ತಾನೇ ಯಾರೆಂದು ಹುಡುಕುವ ಆಟವೇ ಸೋಜಿಗ ಮತ್ತು ಕುತೂಹಲಕಾರಿ. ಆದರೆ ಅದನ್ನು ಕಥೆಯಾಗಿಸುವಲ್ಲಿ martin ತಂಡ ಸೋತಿದೆಯೇನೋ ಅನಿಸುತ್ತದೆ. ಸಿನಿಮಾಗಳಲ್ಲಿ ಒಂದು ಸಾಲಿನ ಕಥೆ ಕೇಳಿದಾಗ ಅದ್ಭುತ ಎನಿಸುತ್ತದೆ. ಅದೇ ಎರಡೂವರೇ ಘಂಟೆಗೆ ಸಿನಿಮಾ ಆಗಬೇಕಾದಾಗ ಕಸರತ್ತು ಮಾಡಬೇಕಾಗುತ್ತದೆ. ಇಲ್ಲಿ ಆ ಕಸರತ್ತು ಸರಿ ಮಾರ್ಗದಲ್ಲಿ ಸಾಗಿಲ್ಲ ಎನ್ನುವುದೇ ನನ್ನ ಅಭಿಪ್ರಾಯ.
ಅದಿರಲಿ. ಮನೆಯಲ್ಲಿಯೇ ಕುಳಿತು ನೋಡುವವರೆ ಇಷ್ಟು ಮಾತಾಡುತ್ತಿದ್ದಾರೆ ಅಂದರೆ ಮೊದಲ ದಿನ ಮೊದಲ ಪ್ರದರ್ಶನಕ್ಕೆ ದುಬಾರಿ ಹಣ ತೆತ್ತು ಹೋದ ನಾವುಗಳು ಏನಾಗಬೇಡ? ಯೋಚಿಸಿ Suma Rangaswamy ವೀರೇಂದ್ರ ಮಲ್ಲಣ್ಣ 😂😂
krishnam pranaya sakhi ott
bagheera 2024 ott
#martin
bheema kannada movie
#ಕನ್ನಡ #sandalwood #OTT #ಕನ್ನಡ #Netflix
#zebra #daalidhananjaya #SatyaDev #amruthaiyengar #GarudaRam
bhairathi ranagal collection
Krishnam pranayam sakhi
#ravichandran #crazystarravichandran #ರವಿಚಂದ್ರನ್ #ಅಣ್ಣಯ್ಯ #annayya
Related Stories
December 19, 2024
December 19, 2024
December 19, 2024