arecanut price today
ಅಡಿಕೆ ಬೆಲೆ ಪ್ರಸ್ತುತ ಕ್ವಿಂಟಾಲ್ ಗೆ 49,621
ಇದೆ ಅಕ್ಟೋಬರ್ ತಿಂಗಳಲ್ಲಿ ಹಿಂದಿನ ಮಾರುಕಟ್ಟೆಗೆ ಹೋಲಿಸಿದರೆ 450 ರೂಪಾಯಿ ಹೆಚ್ಚಳವಾಗಿದೆ ಅಕ್ಟೋಬರ್ ತಿಂಗಳಲ್ಲಿ ಚೇತರಿಸಿಕೊಂಡು 50 ಸಾವಿರದ ಗಡಿ ದಾಟುತ್ತಿದೆ ಕಳೆದ ವರ್ಷ 57 ಸಾವಿರ ಗರಿಷ್ಠ ಅಡಿಕೆ ಬೆಲೆ ದಾಟಿತ್ತು ಇ ವರ್ಷ ಅಧಿಕವಾಗಿ ಮಳೆಯಾಗಿದೆ ಅಡಿಕೆ ಪೂರೈಕೆ ಕಡಿಮೆ ಆಗುವ ಸಾದ್ಯತೆ ಇದೆ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ
ಅಡಿಕೆ ಮಲೆನಾಡು ಭಾಗದ ಪ್ರಮುಖ ಬೆಳೆ ಪ್ರಸ್ತುತ ಇಗ ಗದ್ದೆಗಳೆಲ್ಲ ತೋಟಗಳಾಗಿ ಮಾರ್ಪಟ್ಟಿದೆ ಬೆಳೆಯು ಸಹ ಉತ್ತಮವಾಗಿದೆ ಶಿವಮೊಗ್ಗ ದಾವಣಗೆರೆ ಮಂಗಳೂರು ಉಡುಪಿ ಚಿಕ್ಕಮಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಳರವಾಗಿ ಅಡಿಕೆ ಬೇಳುತ್ತಾರೆ ಹಾಗೆಯೇ ಅಡಿಕೆ ಮರಗಳಲ್ಲೇ ರೋಗವು ಸಹ ಕಂಡು ಬಂದಿದೆ ಎಲೇ ಚುಕ್ಕಿ ರೋಗದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಶಿವಮೊಗ್ಗದ ತೀರ್ಥಹಳ್ಳಿ ಮುಂತಾದ ಕಡೆಗಳಲ್ಲಿ ಸಾವಿರಾರು ಅಡಿಕೆ ಮರಗಳು ಎಲೇ ಚುಕ್ಕಿ ರೋಗಕ್ಕೆ ಬಲಿಯಾಗಿದೆ
ಮತ್ತೆ ಹೊಸದಾಗಿ ಇಗ ಚಂಡೆಕೊಳೆ ರೋಗ ಬರುತ್ತಿದೆ ಕ್ರೋನ್ ರೂಟ್ ಎನ್ನುವ ರೋಗ ಇದರಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ ಕಾರ್ಕಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇ ಚಂಡೆ ಕೂಳೆ ರೋಗ ಕಾಣಿಸಿಕೊಂಡಿದೆ ಇ ಹಿಂದೆ ಎಲೇ ಚುಕ್ಕಿ ರೋಗ ಶಿಲೀಂದ್ರ ಪೈಟೋಪ್ಲಾಸ್ಮ ದುಂಡಾಣು ರೋಗಾಣುಗಳಿಂದ ಅಡಿಕೆ ರೋಗ ಬರುತಿತ್ತು ಆದರೇ ಇಗ ಕ್ರೊನ್ ರೂಟ್ ಚಂಡೆ ಕೂಳೆ ರೋಗ ಹೊಸದಾಗಿ ಕಾಣಿಸಿಕೊಂಡಿದೆ
ರೋಗದಿಂದ ಬಳಲುತ್ತಿರುವ ಮರಗಳು ದಿನಕಳೆದಂತೆ ಸತ್ತು ಹೋಗುವುದು ಎಂದು ತೋಟಗಾರಿಕಾ ಇಲಾಖೆ ರೋಗದ ಲಕ್ಷಣವನ್ನೂ ದೃಢಪಡಿಸಿದೆ ಹಳೆ ಮರದಲ್ಲಿ ಇ ರೋಗ ಕಂಡುಬರುತ್ತದೆ ಇ ರೋಗಕ್ಕೆ ಪೈಟೋಪತೋರ ಮಿಡಿಯೇ ಶಿಲೀಂದ್ರ ಕಾರಣವಾಗಿದ್ದು ಹಸಿರು ಗರಿಗಳು ಜೋತು ಬಿದ್ದು ಹಳದಿ ಬಣ್ಣಕ್ಕೆ ತಿರುಗುತ್ತದೆ ಆಗಸ್ಟ್ ಇಂದ ಡಿಸೆಂಬರ್ ವರೆಗೂ ರೋಗ ಇರುತ್ತದೆ ಹಸಿರು ಗರಿ ಒಣಗಿ ಚಂಡೆಯಾಗಿ ಬಿದ್ದು ಹೋಗುತ್ತದೆ ಅಡಿಕೆ ಹಾಳೆ ಕಾಂಡಕೆ ಆಂಟಿಕೊಳ್ಳುವ ಭಾಗದಲ್ಲಿ ಶಿಲೀಂದ್ರ ಕಾಂಡದ ಒಳ ಭಾಗ ಪ್ರವೇಶಿಸಿ ಮರ ಕೊಲೆಯುವುವಂತೆ ಮಾಡುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
ಅಡಿಕೆ ಬೆಳೆ ಮಲೆನಾಡಿನ ಪರಿಸರದಲ್ಲಿ ಬೆಳೆಯಲು ಉತ್ತಮವಾದ ವಾತಾವರಣ ಹೊಂದಿದೆ ಅಡಿಕೆ ಒಣಗಿದ ಕಾಯಿಯನ್ನು ಮೊಳಕೆ ಬರಿಸಿದ ಸಸಿ ನೆಟ್ಟು 4 ಇದು ವರ್ಷದ ನಂತರ ಅಡಿಕೆ ಪಸಲು ಬರಲು ಶುರುವಾಗುತ್ತದೆ ಚೆನ್ನಾಗಿ ನೀರಿನ ಸೌಲಭ್ಯ ಬೇಕು ಆಗ ಫಸಲು ಚೆನ್ನಾಗಿ ಬರುತ್ತದೆ ಅಡಿಕೆ ಕೊನೆ ಬಿಟ್ಟ ಮೇಲೆ ಹರಳುಗಳು ಉದರದ ಹಾಗೆ ಔಷದಿ ಹೊಡೆಯಬೇಕು 2 ವರ್ಷಕ್ಕೆ ಒಂದು ಸಲ ಗೊಬ್ಬರ ಹಾಕಿ ಬೇಸಾಯ ಮಾಡಬೇಕು ಆಗ ಅಡಿಕೆ ಚಿನ್ನದ ಬೆಳೆ ಬೆಳೆಯುತ್ತದೆ ಹಸ ಬೆಟ್ಟೆ ಗೊರಬುಲ್ ರಾಶಿ ಇಡೀ ಗೊಟು ಹೀಗೆ ಅಡಿಕೆಗಳಲ್ಲಿ ವಿವಿಧ ಬಗೆಯ ಅಡಿಕೆಗೆ ಒಂದೊಂದು ಬೆಲೆ ನಿಗದಿ ಪಡಿಸಲಾಗಿದೆ ತೀರ್ಥಹಳ್ಳಿ ಕೊಪ್ಪ ಶೃಂಗೇರಿ ಉಡುಪಿ ಚಿಕ್ಕಮಗಳೂರು ದಕ್ಷಿಣ ಕನ್ನಡ ಚೆನ್ನಗಿರಿ ದಾವಣಗೆರೆ ಜಿಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ರೈತರ ಜೀವನಾಡಿ ಬೆಳೆ ಪ್ರಸ್ತುತ ಇಗ ಅಡಿಕೆ ಬೆಳೆ ಗೆ ಚಿನ್ನದ ಬೆಲೆ ಇದೆ ಹಾಗಾಗಿ ಅಡಿಕೆ ಕಳ್ಳರ ಹಾವಳಿ ಹೆಚ್ಚಾಗಿದೆ
ಅಡಿಕೆ ಹಾಳೆ ಇಂದ ತಟ್ಟೆ ತಯಾರಿಸುತ್ತಾರೆ ಇದರಿಂದ ಪರಿಸರ ಸ್ನೇಹಿ ಅಡಿಕೆ ತಟ್ಟೆಗಳು ಪ್ಲಾಸ್ಟಿಕ್ ಬಳಸುವುದನ್ನು ನಿಯಂತ್ರಿಸುತ್ತದೆ
ಹಳೆಯ ಅಡಿಕೆ ಮರಗಳು ದಬ್ಬೆ ಮಾಡಲು ಉಪಯೋಗಕ್ಕೆ ಬರುತ್ತದೆ ಹಿಂದೆ ಕಾಡುಗಳೆಲ್ಲ ತೋಟಗಳಗಿ ಪರಿವರ್ತನೆ ಹೊಂದುತ್ತಿದವು ಇಗ ಹೆಚ್ಚಾಗಿ 2 ಮೂರು ವರ್ಷದಿಂದ ಕೋರೋನದಿಂದ ಬೆಂಗಳೂರು ಬಿಟ್ಟು ಬಂದ ಯುವಕರು ತಮ್ಮ ಗದ್ದೆಗಳನ್ನೆಲ ತೋಟಗಳಾಗಿ ಮಾರ್ಪಾಡು ಮಾಡಿದ್ದಾರೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ದಿನವಿಡೀ ದುಡಿದು ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಯುವಕರು ಇಗ ಆರಾಮಾಗಿ ಹಳ್ಳಿ ಕಡೆ ಬಂದು ಅಡಿಕೆ ತೋಟ ಮಾಡಿಕೊಂಡ ನೆಮ್ಮದಿಯಿಂದ ಜೀವನ ನಡೆಸಲು ಪ್ರಾರಂಭ ಮಾಡಿದ್ದರೆ
ಅಡಿಕೆ ತೋಟಗಳಲ್ಲಿ ಮರದ ನಡುವೆ ಕಪ್ಪು ಗಳು ಇರುತ್ತವೆ ಇದರಿಂದ ನೀರು ಮರಗಳ ಮಧ್ಯೆ ಹಾದುಹೋಗಿ ನೀರನ್ನು ಹಿರಿಕೊಳೂತ್ತದೆ ಒಂದು ಮರ 4 ರಿಂದ 6 ಕೊನೆ ಬಿಡುತ್ತದೆ ಮಳೆ ಪ್ರಮಾಣ ಜಾಸ್ತಿ ಆದರೆ ಹರಳು ಉದುರು ಸಮಸ್ಯೆ ಇರುತ್ತದೆ ಹಾಗಾಗಿ ಔಷದಿ 3 ಸರಿ ಮಳೆಗಾಲದ ಸಮಯದಲ್ಲಿ ಹೊಡೆಯಬೇಕು ಬೇಸಾಯ ಮಾಡುವಾಗ ಫಲವತ್ತಾದ ಮಣ್ಣು ಹಸುವಿನ ಗೊಬ್ಬರ ಕಾಂಪೋಸ್ಟ್ ಹಾಕಬೇಕು ಇದರಿಂದ ಇಳುವರಿ ಹೆಚ್ಚುತ್ತದೆ ಮತ್ತು ಹಳೆ ಅಡಿಕೆ ಮರಗಳು ಬಿದ್ದು ಹೋದ ಜಾಗದಲ್ಲಿ ಹೊಸ ಸಸಿ ನೆಡಬೇಕು ನೀರು ಪೂರೈಕೆ ಪ್ರಮುಖವಾಗಿರುತ್ತದೆ ಬೇಸಿಗೆ ಸಮಯದಲ್ಲಿ ಹನಿ ನೀರಾವರಿ ಹಾಯಿ ನೀರಾವರಿ ಮೂಲಕ ನೀರು ಹಾಯಿಸಬೇಕು ಇಲ್ಲವಾದರೆ ಮರಗಳು ಬಿಸಿಲಿನ ಶಾಖಾ ಕೆ ಒಣಗಿ ಇಳುವರಿ ಕುಂದು ಹೋಗುತ್ತದೆ ಪ್ರಸ್ತುತ ಇಗ ಅಡಿಕೆ ರೋಗದ ಲಕ್ಷಣಗಳು ಹೆಚ್ಚಾಗಿದೆ ಎಲೇ ಚುಕ್ಕಿ ರೋಗ ಚೈನಿಸ್ ರೋಗ ಚಂಡೆ ಕೂಳೆ ರೋಗ ಹೀಗೆ ಹಲವಾರು ರೋಗಗಳು ಕಂಡುಬರುತ್ತಿದೆ ಇದುವರೆಗೂ ಕೂಡ ಎಲೇ ಚುಕ್ಕಿ ಹಳದಿ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ ಚಿಕ್ಕಮಗಳೂರು ಜಿಲ್ಲೆಲಿ ಸಾವಿರಾರು ಹೆಕ್ಟೇರ್ ಅಡಿಕೆ ಮರಗಳು ಎಲೇ ಚುಕ್ಕಿ ರೋಗಕ್ಕೆ ತುತ್ತಾಗಿವೆ ತೀರ್ಥಹಳ್ಳಿಯ ಕೆಲವು ಕಡೆ ರೋಗ ಕಾಣಿಸಿಕೊಂಡಿದೆ
ಅಡಿಕೆ ಕೊನೆಯನ್ನು ಕೊಯ್ದು ಸುಲಿಯುವ ವ್ಯವಸ್ಥೆ ಇದೆ ಕಾಯಿಯನ್ನು ಅದನ್ನು ಚೋಗರು ಸೇರಿಸಿ ಹಂಡೆಯಲ್ಲಿ ಬೇಯಿಸಿ ಬಿಸಿಲಿನಲ್ಲಿ ಒಣಗಿಸಬೇಕು ನಂತರ ರಾಶಿ ಇಡಿ ಹಸ ಬೆಟ್ಟೇ ಗೊರಬುಲು ಎಂದು ಬೇರ್ಪಡಿಸಿ ಮಾರುಕಟ್ಟೆ ಗೆ ಕಳುಹಿಸಬೇಕು ಒಂದೊಂದು ಅಡಿಕೆಗೂ ಒಂದೊಂದ್ ದರ ನಿಗದಿ ಪಡಿಸಲಾಗಿದೆ ಹಸ ಕೆ ಅಧಿಕ ಬೆಲೆ ರಾಶಿ ಇಡಿ ಗೂ ಒಂದು ಬೆಲೆ ಬೆಟ್ಟೆ ಗೊಟು ಗೆ ಕಡಿಮೆ ಬೆಲೆ ನಿಗದಿ ಪಡಿಸಲಾಗಿದೆ
ಅಡಿಕೆ ಬೆಳೆಗಾರರ ಸಮಸ್ಯೆ ಗೆ ಸ್ಪಂದಿಸಿದ ತೀರ್ಥಹಳ್ಳಿ ಯ ಶಾಸಕ ಆರಗಜ್ಞಾನೇಂದ್ರ ಎಲೆ ಚುಕ್ಕಿ ರೋಗದ ಬಗ್ಗೆ ದ್ವನಿ ಎತ್ತಿ ವಿಧಾನ ಸೌಧದಲ್ಲಿ ಮಾತಾಡಿದರು ಅಧಿಕಾರಿಗಳು ಪರಿಶೀಲನೆ ನಡೆಸಿದರು ಆದರೂ ಸಹ ಎಲೆ ಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿದಿಲ್ಲ ಮಲೆನಾಡು ಭಾಗದಲ್ಲಿ ಅರಣ್ಯ ಒತ್ತುವರಿ ಮಾಡಿ ಅಡಿಕೆ ತೋಟಗಳು ತಲೆ ಎತ್ತಿವೆ 2 ಎಕರೆ ಅಡಿಕೆ ತೋಟದಲ್ಲಿ 20 ಕ್ವಿಂಟಾಲ್ ಅಡಿಕೆ ಬೆಳೆಯಬಹುದು ಅಂದರೆ ವಾರ್ಷಿಕ ಆದಾಯ 12 ಲಕ್ಷ ಆಗುತ್ತದೆ ಹಸಿ ಕಾಯಿ ಗುತ್ತಿಗೆ ಬೇಯಿಸಿ ಅಡಿಕೆ ಕೊಡುವುದು ರಾಶಿ ಇಡೀ ಯಂತ್ರದಲ್ಲಿ ಸುಲಿಯುವುದು ಮಂಡಿಗೆ ಅಡಿಕೆ ಹಾಕುವುದು ಹೀಗೆ ಅಡಿಕೆ ಬೆಳೆಗಾರರ ಕೆಲಸ ಇರುತ್ತದೆ
ಅಡಿಕೆ ಬೇಯಿಸುವುದು ಬಣ್ಣ ಕಟ್ಟುವುದು ಒಂದು ಕಲೆ ಹದವಾಗಿ ಚೋಗರು ಸೇರಿಸಿ ಒಣಗಿಸಬೇಕು ಇಗ ಎಲ್ಲಾರು ರಾಶಿ ಇಡಿ ಮಿಶನ್ ಇಂದ ಅಡಿಕೆ ಸುಲಿಯುತ್ತರೆ ಹಿಂದೆ ಕೈ ಇಂದ ಸುಲಿಯುತ್ತಿದ್ದರು ಅಡಿಕೆ ಮಳೆ ಅತಿಯಾಗಿ ಬೀಳುವ ಪ್ರದೇಶ ಮಲೆನಾಡು ಭಾಗದಲ್ಲಿ ಬೇಳುತ್ತಾರೆ ಕೇರಳ ರಾಜ್ಯದಲ್ಲಿ ಅಡಿಕೆ ಅತಿಯಾಗಿ ಬೆಳೆಯುತ್ತಾರೆ ಮಲೆನಾಡು ಭಾಗದಲ್ಲಿ ಒಂದೊಂದ್ ಕುಟುಂಬ ಕನಿಷ್ಟ 2 ಎಕರೆ ಅಡಿಕೆ ತೋಟ ಹೊಂದಿರುತ್ತಾರೆ ಒಬ್ಬ ಸಾಫ್ಟವೇರ್ ಇಂಜನಿಯರ್ ಗಿಂತ ಹೆಚ್ಚು ಆದಾಯ ಹೊಂದಿರುತ್ತಾರೆ